ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತೆ ಹೋದ..!

ಈ ಸುದ್ದಿಯನ್ನು ಶೇರ್ ಮಾಡಿ
Selfie
ಸಾಂಧರ್ಭಿಕ ಚಿತ್ರ

ಕೋಲಾರ,ಡಿ.8- ಜನರಿಗೆ ಏನೆಲ್ಲ ಆಸೆ ಇರುತ್ತದೆ ನೋಡಿ ಆನೆ ಡೇಂಜರ್ ಪ್ರಾಣಿ ಅಂತ ಗೊತ್ತಿದ್ದರೂ ಸಹ ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಹೊಸಹಳ್ಳಿಯಲ್ಲಿ ನಡೆದಿದೆ. ನಾರಾಯಣಸ್ವಾಮಿ(38) ಸೆಲ್ಫಿಗೆ ಬಲಿಯಾದ ವ್ಯಕ್ತಿ.   ಬಂಗಾರಪೇಟೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದವು ಇದನ್ನು ನೋಡಿ ಖುಷಿಪಟ್ಟ ನಾರಾಯಣಸ್ವಾಮಿ ಆನೆ ಜೊತೆ ಸೆಲ್ಫಿ ತೆಗೆದುಕೊಂಡರೆ ಹೇಗಿರುತ್ತೆ ಅಂತ ಆನೆ ಬಳಿಗೆ ಹೋಗಿಯೇ ಬಿಟ್ಟ.

ಇನ್ನೇನು ಮೊಬೈಲ್ ತೆಗೆದು ಪಕ್ಕದಲ್ಲೇ ನಿಂತು ಸೆಲ್ಫಿ ತೆಗೆಯಬೇಕು ಅನ್ನುವುಷ್ಟರಲ್ಲಿ ಸೊಂಡಿಲಿನಿಂದ ಅಪ್ಪಳಿಸಿ ತುಳಿದಿದೆ. ಈತನ ಚೀರಾಟ ಕೇಳಿ ಅಕ್ಕಪಕ್ಕದವರು ಓಡಿಬಂದು ಸದ್ದು ಮಾಡುತ್ತಿದ್ದಂತೆ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಕೂಡಲೇ ನಾರಾಯಣಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin