ಆನೆ ದಾಳಿಗೆ ಅರಣ್ಯಾಧಿಕಾರಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Elephant--01

ಮೈಸೂರು. ಮಾ.03 : ಅರಣ್ಯಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಆನೆ ದಾಳಿ ನಡೆದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆನೆ ದಾಳಿಗೆ ಬಲಿಯಾದ ಅಧಿಕಾರಿಯನ್ನು ಹುಲಿ ಯೋಜನೆ ನಿರ್ದೇಶಕ  ಮಣಿಕಂಠನ್ ಎಂದು ಗುರುತಿಸಲಾಗಿದೆ. ಇವರು ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಜೀಪ್ ನಿಂದ ಇಳಿದು ಹೋಗುತ್ತಿದ್ದಂತೆ ಮಣಿಕಂಠನ್ ಮೇಲೆ ಹಠಾತ್ ಆನೆ ದಾಳಿ ನಡೆಸಿದೆ.ಸಿಬ್ಬಂದಿ‌ ಗುಂಡು ಹಾರಿಸಲು‌ ಸಿದ್ಧತೆ ನಡೆಸುತ್ತಿರುವಷ್ಟರಲ್ಲಿ ಮಣಿಕಂಠನ್ ಅವರ ಎದೆಭಾಗ ಹಾಗೂ ತಲೆ ಭಾಗವನ್ನು ಸಲಗ ತುಳಿದು ಹಾಕಿತು ಎನ್ನಲಾಗಿದೆ.
ಕಳೆದ ವರ್ಷದ ಬಂಡೀಪುರದ ಕಾಡಿನ ಬೆಂಕಿಗೆ ಉಪವಲಯ ಅರಣ್ಯಾಧಿಕಾರಿ ಮುರಿಗೆಪ್ಪ ಬಲಿಯಾಗಿದ್ದರು. ಈ ವರ್ಷ ಬೆಂಕಿ ಬಿದ್ದಿರುವುದನ್ನು ನೋಡಲು ಹೋದ ಅಧಿಕಾರಿ ಬಲಿಯಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin