ಆನೆ ದಾಳಿಗೆ ಕರ್ತವ್ಯದಲ್ಲಿದ್ದ ಫಾರೆಸ್ಟ್ ವಾಚರ್ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

84d86029-84cb-40a9-8fb6-abd5296793fd ರಾಮನಗರ, ನ.3-ಕರ್ತವ್ಯದಲ್ಲಿದ್ದ ಫಾರೆಸ್ಟ್ ವಾಚರ್ ಆನೆ ದಾಳಿಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಕನಕಪುರ ತಾಲ್ಲೂಕಿನ ದುಂಟೂರು ಗ್ರಾಮದಲ್ಲಿ ನಡೆದಿದೆ. ದೊಡ್ಡಶೆಟ್ಟಿ(55) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ದೊಡ್ಡಶೆಟ್ಟಿ ಚನ್ನಪಟ್ಟಣ ತಾಲ್ಲೂಕಿನ ಪುಟ್ಟಗೌಡದೊಡ್ಡಿ ನಿವಾಸಿ. ಐವರು ಫಾರೆಸ್ಟ್ ವಾಚರ್‍ಗಳು ಕರ್ತವ್ಯದಲ್ಲಿದ್ದಾಗ ಕಾವೇರಿ ವನ್ಯಧಾಮ ವಿಭಾಗದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ನಡೆಸಿದ ಸಂದರ್ಭದಲ್ಲಿ ವಾಚರ್ ದೊಡ್ಡಶೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

890d508b-e5bc-4705-9319-bdd0609b6f1d

Facebook Comments

Sri Raghav

Admin