ಆನೆ ದಾಳಿಗೆ ಬಾಳೆ ತೋಟ ಧ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

elephant-channapatanna

ಚನ್ನಪಟ್ಟಣ, ಆ.19- ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಆನೆ ಹಿಂಡು ದಾಳಿ ಮಾಡಿ ಕಟಾವಿಗೆ ಬಂದಿದ್ದ ಬೆಳೆಯನ್ನು ನಾಶಪಡಿಸಿದ ಪರಿಣಾಮ ಸಾವಿರಾರು ರೂ. ನಷ್ಟ ಉಂಟಾಗಿದೆಮೊಡ್ಡೆ ಕಾಳಣ್ಣರವರ ಪಾಪಣ್ಣ ಎಂಬುವವರಿಗೆ ಸೇರಿದ ಒಂದು ಎಕೆರೆ ಬಾಳೆ ತೋಟಕ್ಕೆ ಕಳೆದ ರಾತ್ರಿ 12 ರಿಂದ 1 ಗಂಟೆ ವೇಲೆಯಲ್ಲಿ ದಾಳಿ ನಡೆಸಿದ ಆನೆಗಳ ಹಿಂಡು ಇಡೀ ತೋಟವನ್ನು ಧ್ವಂಸ ಮಾಡಿದೆ.ಕಳೆದ 15 ದಿನಗಳ ಹಿಂದಷ್ಟೆ ಆನೆಗಳು ದಾಳಿ ನಡೆಸಿದ್ದರಿಂದ ಆಗಲೂ ರೈತರು ಬೆಳೆ ನಷ್ಟ ಅನುಭವಿಸಿದ್ದರು.

ಈ ಬಗ್ಗೆ ಎಷ್ಟೇ ದೂರು ನೀಡಿದರೂ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದೆ ಇದ್ದ ಪರಿಣಾಮ ನಿನ್ನೆ ಮತ್ತೆ ದಾಳಿ ನಡೆದು ರೈತ ಕಂಗಾಲಾಗಿದ್ದಾನೆ.ಒಂದು ಬಾಳೆಗೊನೆ ಬೆಲೆ 400 ರೂ.ಗಳಾಗಿದ್ದು, 70ಗೊನೆಯಷ್ಟನ್ನು ಆನೆಗಳ ಹಿಂಡು ನಾಶ ಮಾಡಿವೆ ಎನ್ನಲಾಗಿದೆ. ಈ ಹಿಂದೆ ದಾಳಿ ಮಾಡಿದ್ದಾಗಿನ ಪರಿಹಾರವನ್ನೇ ಅರಣ್ಯ ಇಲಾಖೆಯಿಂದ ನೀಡದೆ ಸತಾಯಿಸುತ್ತಿದ್ದು, ಹೀಗೆ ಮುಂದುವರಿದರೆ ರೈತರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಸರಿಯಾದ ರೀತಿಯಲ್ಲಿ ರೈತರಿಗೆ ಸ್ಪಂದಿಸದೇ ಸರಿಯಾದ ಸಮಯಕ್ಕೆ ಸೂಕ್ತ ಪರಿಹಾರಗಳನ್ನೂ ನೀಡದೆ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಂಡು ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಬೇಕೆಂದು ಅಲ್ಲಿನ ರೈತರು ಆಗ್ರಹಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin