ಆನ್‍ಲೈನ್‍ನಲ್ಲಿ ಎಪಿಎಲ್‍ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Retion Card Online

ಬೆಂಗಳೂರು, ಜ.9-ಇಂದಿನಿಂದ ಆನ್‍ಲೈನ್ ಮೂಲಕ ಎಪಿಎಲ್ (ಆದ್ಯತೇತರ ಕುಟುಂಬ) ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಆಧಾರ್ ಸಂಖ್ಯೆ ನಮೂದಿಸಿ ವೆಬ್‍ಸೈಟ್‍ನಲ್ಲಿ ಎಪಿಎಲ್‍ಗಾಗಿ ಅರ್ಜಿ ಸಲ್ಲಿಸಬಹುದು. 15 ದಿನಗಳೊಳಗಾಗಿ ಅಂಚೆ ಮೂಲಕ ಮನೆ ಬಾಗಿಲಿಗೆ ಖಾಯಂ ಪಡಿತರ ಚೀಟಿ ಬರಲಿದೆ. ಆಗ 100 ರೂ. ಶುಲ್ಕ ಪಾವತಿಸಿದರೆ ಸಾಕು ಎಂದು ವಿವರಿಸಿದರು. ಸಂಕ್ರಾಂತಿ ನಂತರ ಬಿಪಿಎಲ್ (ಆದ್ಯತಾ ಕುಟುಂಬ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲೂ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದರು.

ಇಂದಿನಿಂದ ರಾಜ್ಯಾದ್ಯಂತ ಎಪಿಎಲ್ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ತಿದ್ದುಪಡಿಗೂ ಅವಕಾಶವಿದೆ. ಹೊಸ ಪಡಿತರಚೀಟಿಗೆ ಅರ್ಜಿ ಸಲ್ಲಿಸುವಾಗ ಎಪಿಎಲ್‍ಗೆ ಬಯೋ ಮೆಟ್ರಿಕ್ ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ಒನ್, ಸೈಬರ್‍ಸೆಂಟರ್ ಸೇರಿದಂತೆ ಎನ್‍ಜಿಒಗಳು ಅರ್ಜಿ ಸಲ್ಲಿಕೆಯಲ್ಲಿ ಕಾರ್ಯನಿರ್ವಹಿಸಬಹುದು. ಜಿಲ್ಲಾ ಮಟ್ಟದ ಉಪನಿರ್ದೇಶಕರು ಇವರಿಗೆ ಸೂಕ್ತ ತರಬೇತಿ ನೀಡಲಿದ್ದಾರೆ. ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ದೇಶದಲ್ಲೇ ಮೊದಲ ಬಾರಿಗೆ ಸಕಾಲ ಯೋಜನೆಯಲ್ಲಿ ಅವಕಾಶ ಕಲ್ಲಿಸಲಾಗಿದೆ. ಎಪಿಎಲ್ ಪಡಿತರ ಚೀಟಿಗೆ ಯಾವುದೇ ಷರತ್ತು ಅನ್ವಯಿಸುವುದಿಲ್ಲ.

ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರ ಐದು ಕೆಜಿ ತೂಕದ ಅಡುಗೆ ಅನಿಲ ಮತ್ತು ರೆಗ್ಯುಲೇಟರ್‍ಗಳನ್ನು ನೀಡಲಿದ್ದು, ರಾಜ್ಯ ಸರ್ಕಾರ ಎರಡು ಬರ್ನಲ್‍ಗಳುಳ್ಳ ಸ್ಟೌವ್ ನೀಡಲಿದೆ. ಬೇರೆ ರಾಜ್ಯಗಳಲ್ಲಿ ಈ ಯೋಜನೆ ಈಗಾಗಲೇ ಅನುಷ್ಠಾನಗೊಂಡಿದ್ದು, ನಮ್ಮಲ್ಲಿ ಅನುಷ್ಠಾನಗೊಳ್ಳಬೇಕಿದೆ. ಗರಿಷ್ಠ ಒಂದು ಸಾವಿರ ಸಹಾಯಧನದಲ್ಲಿ ಉಚಿತವಾಗಿ ಫಲಾನುಭವಿಗಳಿಗೆ ಈ ಯೋಜನೆ ತಲುಪಲಿದ್ದು, ಇದಕ್ಕೆ ಮೂರು ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆಯ್ಕೆಯಾದವರಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ವಿವರಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin