ಆನ್‍ಲೈನ್‍ನಲ್ಲಿ ಖರೀದಿಸಿದ ಮೊಬೈಲ್ ಸ್ಪೋಟ..!

ಈ ಸುದ್ದಿಯನ್ನು ಶೇರ್ ಮಾಡಿ

Mobile-Balst

ಮಂಡ್ಯ,ಸೆ.16- ಗ್ರಾಹಕರೇ ಆನ್‍ಲೈನ್‍ನಲ್ಲಿ ಯಾವುದೇ ವಸ್ತುಗಳನ್ನು ಕೊಳ್ಳುವಾಗಿ ಎಚ್ಚರಿಕೆ ವಹಿಸುವುದು ಮುಖ್ಯ. ಇಲ್ಲಿನ ಗ್ರಾಹಕರೊಬ್ಬರು ಆನ್‍ಲೈನ್ ಮೂಲಕ ಖರೀದಿಸಿದ ಮೊಬೈಲ್ ಸ್ಫೋಟಗೊಂಡಿದೆ. ಇಲ್ಲಿನ ಗ್ರಾಹಕರೊಬ್ಬರು ಆನ್‍ಲೈನ್‍ನಲ್ಲಿ ರೆಡ್ ಮಿ ನೋಟ್ 4 ಮೊಬೈಲ್‍ಗಳನ್ನು ಬುಕ್ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬುಕ್ ಮಾಡಿದ ಮೊಬೈಲ್ ಮನೆಗೆ ತಲುಪಿದೆ.  ಆನ್‍ಲೈನ್‍ನಲ್ಲಿ ಖರೀದಿಸಿದ ಮೊಬೈಲ್‍ನ್ನು ಮೊದಲು ಚಾರ್ಜ್‍ಗೆ ಹಾಕಿದಾಗ ಮೊಬೈಲ್ ಆನ್ ಆಗೇ ಇಲ್ಲ. ಹತ್ತಿರದ ಆರ್‍ಪಿ ರೋಷನ್ ಮೊಬೈಲ್ ಅಂಗಡಿಗೆ ಪರೀಕ್ಷಿಸಲು ತಂದುಕೊಟ್ಟಿದ್ದಾರೆ.

ಅಂಗಡಿ ಮಾಲೀಕ ರಘು ಎಂಬುವರು ಮೊಬೈಲ್‍ನ್ನು ಆನ್ ಮಾಡಿ ಪರಿಶೀಲಿಸುತ್ತಿದ್ದಂತೆ ಅದರಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ರಘು ಅದನ್ನು ದೂರಕ್ಕೆ ಎಸೆದಿದ್ದಾರೆ. ತಕ್ಷಣ ಮೊಬೈಲ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಅನಾಹುತಗಳು ಸಂಭವಿಸಿಲ್ಲ.

Facebook Comments

Sri Raghav

Admin