ಆನ್‍ಲೈನ್‍ನಲ್ಲಿ ದೂರು ನೀಡಿದರೆ ಮನೆಗೆ ಬಂದು ಸಮಸ್ಯೆ ಬಗೆಹರಿಸುತ್ತಾರೆ ಈ ಪಟ್ಟಣ ಪಂಚಾಯ್ತಿ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Hanur--01

ಹನೂರು, ಮೇ 12- ಯಾವುದೇ ಸಮಸ್ಯೆಗೆ ಆನ್‍ಲೈನ್‍ನಲ್ಲಿ ದೂರು ನೀಡಿದರೆ ಸಾಕು ಪಟ್ಟಣ ಪಂಚಾಯ್ತಿ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುತ್ತಾರೆ. ಎಲ್ಲಿ ಅಂತೀರಾ… ಇಂತಹ ಆನ್‍ಲೈನ್ ವ್ಯವಸ್ಥೆಯನ್ನು ಹನೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ.  ನಿಮ್ಮ ಬಳಿ ಇರುವ ಆಂಡ್ರಾಯಿಡ್ ಮೊಬೈಲ್ ಮೂಲಕ ಆನ್‍ಲೈನ್‍ಗೆ ದೂರು ಸಲ್ಲಿಸಿದರೆ ಸಾಕು. ನಿಮ್ಮ ಸಮಸ್ಯೆ ಬಗೆಹರಿದಂತೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಆರ್.ನರೇಂದ್ರ ತಿಳಿಸಿದರು.ಪ.ಪಂ. ಕಚೇರಿಯಲ್ಲಿ ಆಳವಡಿಸಲಾಗಿರುವ ಜನಹಿತ ಆನ್‍ಲೈನ್ ಡಿಸ್‍ಪ್ಲೇ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅನುಕೂಲಕ್ಕಾಗಿ ಇಂತಹ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದು ನೂತನ ಜನಹಿತ ತಂತ್ರಾಂಶ ಅಭಿವೃದ್ದಿಪಡಿಸಿದೆ ಎಂದರು.
ಈ ಆಪ್ಯ್ ಡೌನ್ ಲೋಡ್ ಮಾಡಿಕೊಂಡು ಜನರು ನೇರವಾಗಿ ಮನೆಯಲ್ಲಿ ಅಥವಾ ತಾವು ಇರುವ ಸ್ಥಳದಲ್ಲಿಯೇ ದೂರು ಸಲ್ಲಿಸಬಹುದು. ಹಾಗೂ ವಾಟ್ಸ್‍ಆಪ್ ಫೇಸ್‍ಬುಕ್‍ಟ್ವೆಟರ್‍ನಲ್ಲೂಜನರು ಸಮಸ್ಯೆ ಹೇಳಿಕೊಂಡರೆ ಪ.ಪಂ. ಸಿಬ್ಬಂದಿ ತಕ್ಷಣ ಹಾಜರಾಗಿ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದರು.

ಪಟ್ಟಣದಲ್ಲಿಕುಡಿಯುವನೀರುಚರಂಡಿ ಸ್ವಚ್ಚತೆಕಸ ವಿಲೇವಾರಿವ್ಯಾಪಾರ ಉದ್ದಿಮೆ ಪರವಾನಗಿಕುಡಿಯುವನೀರಿನ ನಲ್ಲಿ ಸಂಪರ್ಕಕ್ಕೆಅರ್ಜಿ ಸಲ್ಲಿಕೆ ಕಟ್ಟಡ ಪರವಾನಿಗೆಸೇರಿದಂತೆ ಪ.ಪಂ. ವ್ಯಾಪ್ತಿಗೆ ಒಳಪಡುವ ಯಾವುದೇ ಕೆಲಸವಿರಲಿ ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಸಲ್ಲಿಕೆಯಾದದೂರುಗಳ ಪರಿಶೀಲನೆ ಹಾಗೂ ಇತ್ಯರ್ಥಗೊಳಿಸಲು ಪ್ರತ್ಯೇಕ ಸಿಬ್ಬಂಧಿಗಳನ್ನು ನೇಮಕ ಮಾಡಲಾಗುವುದು.ಹೀಗಾಗಿ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವಎಲ್ಲಾ ಪ್ರಕರಣಗಳಿಗೆ ಮುಕ್ತಿ ದೊರೆಯಲಿದೆ ಎಂದು ತಿಳಿಸಿದರು.

ಎಲ್‍ಇಡಿ ಟಿವಿ ಪ್ರದರ್ಶನ :

ಸಾರ್ವಜನಿಕರ ಅನುಕೂಲಕ್ಕಾಗಿ ಪ.ಪಂ. ಜಾರಿ ಮಾಡಿರುವ ಇ-ಆಡಳಿತ ಜಾಗೃತಿ ಮೂಡಿಸಲುಪ.ಪಂ. ಕಚೇರಿಯಲ್ಲಿಎಲ್‍ಇಡಿಟಿವಿಯನ್ನೇ ಅಳವಡಿಸಲಾಗಿದ್ದು ಒಮ್ಮೆಕಚೇರಿಗೆ ಆಗಮಿಸಿದರೆ ಮೊಬೈಲ್‍ನಲ್ಲಿಜನಹಿತತಂತ್ರಾಂಶಡೌನ್‍ಲೋಡ್‍ಮಾಡಿಕೊಳ್ಳುವ ಬಗ್ಗೆ ತಿಳಿಯುತ್ತದೆ ಎಂದು ಮುಖ್ಯಾಧಿಕಾರಿ ಮೋಹನ್‍ಕೃಷ್ಣ ತಿಳಿಸಿದರು.   ಜನಹಿತಮೊಬೈಲ್‍ತಂತ್ರಾಂಶವನ್ನುಕರ್ನಾಟಕಡೇಟಾಮುನ್ಸಿಪಲ್ ಸೊಸೈಟಿಯಿಂದ ಅಭಿವೃದ್ದಿ ಪಡಿಸಲಾಗಿದ್ದು ಸಾರ್ವಜನಿಕರು ಈತಂತ್ರಾಂಶವನ್ನು ಪೌರ ಸುಧಾರಣಕೋಶದ ವೆಬ್‍ಸೈಟ್(http:/www.mrc.gov.in) ನಿಂದ ಅಥವಾ ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.  ಈ ವೇಳೆ ಅಧ್ಯಕ್ಷೆ ಮಮತಮಹದೇವಹನೂರು ಬ್ಲಾಕ್ ಅಧ್ಯಕ್ಷ ಕೆಂಪಯ್ಯ ಸದಸ್ಯರಾದ ರಾಮೇಶ್, ರಾಜುಗೌಡ, ವೆಂಕಟೇಶ್, ಜಯಪ್ರಕಾಶ್ ಗುಪ್ತ, ನಾಗಣ್ಣ, ಅಧಿಕಾರಿಗಳಾದ ನಂಜುಂಡಶೆಟ್ಟಿ ಬೈರಪ್ಪ ಮನಿಯ ಮಾದೇಶ ಮುಖಂಡರಾದ ಚಿಕ್ಕತಮ್ಮಯ್ಯ, ಕಿಟ್ಟಪ್ಪ, ಮದೇಶ್, ಸುದೇಶ್, ಕಿರಣ್, ಬುಂಡಚೀಕ ಇತರರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin