ಆನ್‍ಲೈನ್ ಮಾರುಕಟ್ಟೆಯಿಂದ ರೈತರಿಗೆ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

dabas-pete

ದಾಬಸ್‍ಪೇಟೆ, ಸೆ.6- ಮಾರುಕಟ್ಟೆಯಲ್ಲಿ ಪಾರದರ್ಶಕತೆ, ಸರಳತೆ, ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಿ ರೈತರಿಗೆ ಲಾಭ ತರಲು ಕರ್ನಾಟಕ ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ ಎಂದು ಮರಳಕುಂಟೆ ತಾಪಂ ಸದಸ್ಯ ನಾಗಭೂಷಣ್ ತಿಳಿಸಿದರು.  ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದಲ್ಲಿ ಕೃಷಿ ವಿಶ್ವ ವಿದ್ಯಾಲಯ ಜಿಕಿವಿಕೆ ಅಂತಿಮ ವರ್ಷದ ಬಿಎಸ್ಸಿ (ಗ್ರಾಮೀಣಾ ಕೃಷಿ ಕಾರ್ಯಾನುಭವ) ಹಾಗೂ ಕೃಷಿ ಮರಾಟ ಮಂಡಲಿ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳ ಆನ್‍ಲೈನ್ ಮಾರುಕಟ್ಟೆ ಬಗ್ಗೆ ಮಾತನಾಡಿದ ಅವರು, ರೈತರ ಹತ್ತಿರಕ್ಕೆ ಮಾರುಕಟ್ಟೆಗಳು ಹಾಗೂ ಉತ್ಪನ್ನಗಳ ಮೇಲೆ ಬೆಲೆಗಳನ್ನು ನಿರ್ಣಯ ಮಾಡುವುದರಿಂದ ರೈತರಿಗೆ ಉತ್ತಮ ಲಾಭ ದೊರೆಯುತ್ತದೆ ಹಾಗೂ ಬ್ಯಾಂಕ್‍ನಿಂದ ಸಾಲ ಸೌಲಭ್ಯ ದೊರೆಯುತ್ತದೆ ಎಂದರು.
ಕರ್ನಾಟಕ ರಾಜ್ಯ ಕೃಷಿ ಮರಾಟ ಮಂಡಲಿಯ ಸಹಾಯಕ ವ್ಯವಸ್ಥಾಪಕ ಎಂ.ಎಂ.ಸ್ವಾಮಿ ಮಾತನಾಡಿ, ಪಾರದರ್ಶಕ ವ್ಯವಸ್ಥೆಯಲ್ಲಿ ಸರಳವಾಗಿ ಉತ್ಪನ್ನಗಳನ್ನು ಮರಾಟ ಮಾಡಿ ರೈತರು ಸ್ಪರ್ಧಾತ್ಮಕ ಬೆಲೆ ಪಡೆಯಲು ಹೊಸ ನಿಯಮದಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಕೃಷಿ ಮರಾಟ ನೀತಿ 2013 ರಂದು ಜಾರಿಗೆ ತಂದಿದೆ ಇದರಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆಯ ವ್ಯಾಪ್ತಿಯನ್ನು ಹೆಚ್ಚಾಗಿ ಸ್ಪರ್ಧಾತಕ ಬೆಲೆಯನ್ನು ದೊರಕಿಸಲು, ಮರಾಟದ ದಿನವೇ ಅವರ ಬ್ಯಾಂಕ್ ಖಾತೆಗೆ ಹಣ ಪಾವತಿಯಗುವಂತೆ ಆನ್ ಲೈನ್ ಮರಾಟ ವೇದಿಕೆಯು ಸಹಾಯ ಮಾಡುತ್ತಿದೆ ಎಂದು ಹೇಳಿದರು.ಕೃಷಿ ವಿದ್ಯಾಲಯ ಪ್ರಾಧ್ಯಪಕಿ ಕೆ.ಸಿ. ಲಲಿತಾ, ಕೃಷಿ ಪ್ರಾಧ್ಯಾಪಕ ಡಾ.ನಾರಯಣ ಸ್ವಾಮಿ, ಡಾ.ಗಿರೀಶ್, ಡಾ.ಮುರುಳಿಮೋಹನ, ಅಧ್ಯಕ್ಷರಾದ ಆಶ್ವಥರಾಜು, ಸದಸ್ಯರಾದ ಗಂಗಧರ್ಮಯ್ಯ, ಗಂಗಹನುಮಯ್ಯ, ಲಿಂಗರಾಜು, ಗೋಪಾಲಯ್ಯ, ಶ್ರೀನಿವಾಸ್, ಪವನ್ ವಿದ್ಯಾರ್ಥಿಗಳಾದ ಕುಸುಮಕುಮಾರ್, ಕ್ರೀಪಾ, ಲತಾಶ್ರೀ , ಸುಮ ಹಾಗೂ ರೈತರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin