ಆಪ್ ಉಚ್ಛಾಟಿತ ಶಾಸಕ ಸಂದೀಪ್ ಕುಮಾರ್ ವಿರುದ್ದ ಮಹಿಳೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Sex

ನವದೆಹಲಿ. ಸೆ.03 : ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡು ಮಂತ್ರಿ ಪದವಿ ಕಳೆದುಕೊಂಡಿದ್ದ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ಅವರ ವಿರುದ್ಧ ಸೆಕ್ಸ್ ಸಿಡಿಯಲ್ಲಿದ್ದ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ. ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡು ಮಂತ್ರಿ ಪದವಿ ಕಳೆದುಕೊಂಡಿದ್ದ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ಅವರನ್ನು ಆಮ್ ಆದ್ಮಿ ಪಕ್ಷ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.  ಪಡಿತರ ಚೀಟಿ ಪಡೆಯಲು ನೆರವು ಕೋರಿಕೊಂಡು ನಾನು ಸಚಿವ ಸಂದೀಪ್ ಕುಮಾರ್ ಅವರ ಬಳಿ ಹೋಗಿದ್ದೆ. ಆಗ ಮತ್ತು ಬರಿಸುವ ಪಾನೀಯ ಕೊಟ್ಟು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತಾ ಪೊಲೀಸರ ಬಳಿ ದೂರಿದ್ದಾಳೆ. ಅಷ್ಟೇ ಅಲ್ಲ ಸಂದೀಪ್ ಕುಮಾರ್ ಸಚಿವರಾದ ಮೇಲೆ ಆ ಸಿಡಿ ಚಿತ್ರೀಕರಿಸಲಾಗಿದೆ ಅಂತ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಆಪ್ ಸಚಿವರಾಗಿದ್ದ ಸಂದೀಪ್ ಕುಮಾರ್ ಇಬ್ಬರು ಮಹಿಳೆಯರ ಜೊತೆ ಚೆಲ್ಲಾಟವಾಡ್ತಾ ಇದ್ದ ದೃಶ್ಯವಿರುವ ಸಿಡಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂದೀಪ್ ಕುಮಾರ್ ರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin