ಆಫ್ಘಾನಿಸ್ತಾನದಲ್ಲಿ ಅಮೆರಿಕದ ವಾಯುನೆಲೆ ಬಳಿ ಸ್ಫೋಟ : 4 ಸಾವು, ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

America

ಕಾಬೂಲ್, ನ.12- ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಬೃಹತ್ ಸೇನಾ ನೆಲೆ ಬಳಿ ಇಂದು ಮುಂಜಾನೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮಜರ್-ಎ-ಷರೀಫ್ ಪಟ್ಟಣದಲ್ಲಿ ನಿನ್ನೆ ಜರ್ಮನ್ ಕಾನ್ಸುಲೆಟ್ ಕಚೇರಿ ಮೇಲೆ ನಡೆದ ಆತ್ಮಾಹುತಿ ಟ್ರಕ್ ಬಾಂಬ್ ಸ್ಫೋಟಲ್ಲಿ ಆರು ಜನ ಬಲಿಯಾದ ಬೆನ್ನಲ್ಲೇ ಈ ಘಟನೆ ನಡೆದಿರುವುದರಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.  ಬಗ್ರಮ್ ವಾಯು ನಲೆಯಲ್ಲಿ ಮುಂಜಾನೆ 5.30ರಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆ ಹೇಳಿದೆ.

ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಯಾವುದೇ ಭಯೋತ್ಪಾದನೆ ಸಂಘಟನೆ ಹೇಳಿಕೊಂಡಿಲ್ಲವಾದರೂ ಆಫ್ಘನ್ ವಿವಿಧ ಭಾಗಗಳಲ್ಲಿ ದಾಳಿ ಮತ್ತು ಹಿಂಸಾಚಾರ ತೀವ್ರಗೊಳಿಸಿರುವ ತಾಲಿಬಾನ್ ಉಗ್ರರ ಕೈವಾಡ ಇರುವುದರಲ್ಲಿ ಸಂಶಯವಿಲ್ಲ.  ಕಾಬೂಲ್‍ಗೆ ಹತ್ತಿರದಲ್ಲಿರುವ ಅತಿಭದ್ರತೆಯ ಬಗ್ರಮ್ ವಾಯು ನೆಲೆಯಲ್ಲಿ ಈ ಹಿಂದೆಯೂ ಭಯೋತ್ಪಾದಕರಿಂದ ದಾಳಿ ನಡೆದಿತ್ತು.
ಅಫ್ಘಾನಿಸ್ತಾನದ ಮಜರ್-ಎ-ಷರೀಫ್‍ನಲ್ಲಿರವ ಜರ್ಮನ್ ಕಾನ್ಸುಲೇಟ್ ಕಚೇರಿ ಮೇಲೆ ತಾಲಿಬಾನ್ ಉಗ್ರರು ನಿನ್ನೆ ಮುಂಜಾನೆ ನಡೆಸಿದ ಪ್ರಬಲ ಟ್ರಕ್ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಆಕ್ರಮಣದ ಮೂಲಕ ತಾಲಿಬಾನ್ ಉಗ್ರರ ಹತ್ಯಾಕಾಂಡ ಮುಂದುವರೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin