ಆಫ್ಘಾನಿಸ್ತಾನದ ಸಂಸತ್ ಭವನದ ಎದುರು ತ್ರಿವಳಿ ಬಾಂಬ್ ಸ್ಫೋಟ : 50ಕ್ಕೂ ಹೆಚ್ಚು ಜನ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Afganistan-Blast

ಕಾಬೂಲ್, ಜನವರಿ 11 :  ಆಫ್ಘಾನಿಸ್ತಾನದ ಸಂಸತ್‌ ಭವನದ ಸಮೀಪ ಮಂಗಳವಾರ ಸಂಭವಿಸಿದ ಮೂರು ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ 50 ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದು, 80 ಜನರು ಗಾಯಗೊಂಡಿದ್ದಾರೆ. ಆಫ್ಘಾನಿಸ್ತಾನದ ಯುಎಇ ರಾಯಭಾರಿ ದಕ್ಷಿಣ ಕಂದಹಾರ್ ನಲ್ಲಿರುವ ಆಫ್ಘಾನಿಸ್ತಾನ ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಕಾಂಪೌಂಡ್ ಒಳಗಿದ್ದ ಸೋಫಾದಲ್ಲಿ ಬಾಂಬ್ ವೊಂದನ್ನು ಇಟ್ಟು ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಯುಎಇ ರಾಯಭಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ.

ಇದಾದ ಕೆಲವೇ ಗಂಟೆಗಳಲ್ಲಿ ಸಂಸತ್ತಿನ ಬಳಿ ಕೂಡ ಬಾಂಬ್ ಸ್ಫೋಟ ನಡೆಸಲಾಗಿದೆ. ಈ ವೇಳೆ 30 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 80ಕ್ಕೂ ಹೆಚ್ಚಿ ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ, ಜನನಿಬಿಡ ಪ್ರದೇಶಗಳಲ್ಲಿಯೂ ತಾಲಿಬಾನ್ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು, ಈ ವೇಳೆ ಸಾವನ್ನಪ್ಪಿರುವವವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಭಾರತ ಹಣಕಾಸು ನೆರವು ನೀಡಿರುವ ಸಂಸತ್ ಬಳಿಯೇ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಹೊಣೆಯನ್ನು ಆಫ್ಘನ್‌ ತಾಲಿಬಾನ್‌ ಉಗ್ರರು ಹೊತ್ತುಕೊಂಡಿದ್ದಾರೆ. ಪ್ರಮುಖ ಬೇಹುಗಾರಿಕಾ ಏಜೆನ್ಸಿಯ ಸಿಬ್ಬಂದಿಯನ್ನು ಗುರಿಯಾಗಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ತಾಲಿಬಾನ್‌ ವಕ್ತಾರ ಜಬಿವುಲ್ಲಾ ಮುಜಾಹಿದ್‌ ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin