ಆಮ್ನೆಸ್ಟಿ ಮಾನ್ಯತೆ ರದ್ಧತಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

bjp--protest

ನಂಜನಗೂಡು, ಆ.25- ತಾಲೂಕು ಬಿಜೆಪಿ ಕಾರ್ಯಕರ್ತರು ಅಮ್ನೆಸ್ಟಿ ಅಂತಾರಾಷ್ಟ್ರೀಯ ಸಂಸ್ಥೆಯ ಮಾನ್ಯತೆ ರದ್ದು ಮಾಡುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.ಮುಖಂಡ ಎಸ್.ಮಹದೇವಯ್ಯ ಮಾತನಾಡಿ, ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಘಟನೆ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತ್ಯೇಕ ಕಾಶ್ಮೀರ ಪರ ಮತ್ತು ಭಾರತೀಯ ಸೇನೆ ವಿರುದ್ದ ಘೋಷಣೆ ಕೂಗಿ ಅವಮಾನಿಸಿ ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿ ಸಂಸ್ಥೆಯ ಮಾನ್ಯತೆ ರದ್ಧತಿಗೆ ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ವಿನಯ್‍ಕುಮಾರ್ ಮಾತನಾಡಿ, ದೇಶ ದ್ರೋಹದ ಕೃತ್ಯದಲ್ಲಿ ಭಾಗಿಯಾಗಿರುವ ಅಮ್ನೆಸ್ಟಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕ್ರಮ ಅಯೋಜಕರ ಹಾಗೂ ಘೋಷಣೆ ಕೂಗಿದ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು. ಹಾಗೂ ದೇಶ ವಿರುದ್ದ ಕೃತ್ಯಗಳಲ್ಲಿ ಭಾಗಿಯಾಗಿರುವ ವಿರುದ್ದ ಶಾಂತಿಯುತ ಹೋರಾಟ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆನೊಂದಾಯಿಸಿರುವ ಸುಳ್ಳು ಮೊಕದ್ದಮೆಗಳನ್ನು ವಜಾ ಮಾಡಿ, ತಕ್ಷಣದಲ್ಲಿ ಬಿಡುಗಡೆ ಮಾಡಬೇಕು,ಮುಖ್ಯ ಮಂತ್ರಿ ವಿರುದ್ಧ ಧಿಕ್ಕಾರ

 

ಕೂಗುತ್ತಾ ಒಂದು ಗಂಟೆಕಾಲ ಧರಣಿ ಸತ್ಯಾಗ್ರಹ ಮಾಡಿ, ತಹಸೀಲ್ದಾರ್ ಬಸವರಾಜು ಹೆಚ್. ಚಿಗರಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಪಂ ಸದಸ್ಯರಾದ ಹೆಚ್.ಎಸ್.ದಯಾನಂದಮೂರ್ತಿ, ಮಂಗಳ ಸೋಮಶೇಖರ್, ಸಿ. ಚಿಕ್ಕರಂಗನಾಯಕ, ಸಿಂಧುವಳ್ಳಿ, ಕೆಂಪಣ್ಣ, ನಗರಾಧ್ಯಕ್ಷ ವಿನಯ್‍ಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಎನ್.ಸಿ,ಬಸವಣ್ಣ, ಕೇಬಲ್ ಸಿದ್ದರಾಜು, ಎನ್.ಆರ್,ಕೃಷ್ಣಪ್ಪಗೌಡ, ಉಪಾಧ್ಯಕ್ಷರಾದ ಹಗಿನವಾಳು ಹೆಚ್.ಎಸ್.ಸುರೇಶ್, ಹೊರಳವಾಡಿ ಪುಟ್ಟಸ್ವಾಮಿ, ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಉಮಾದೇವಿ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin