ಆಮ್ನೆಸ್ಟಿ ವಿರುದ್ಧ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

bjp-4

ಕೆ.ಆರ್.ನಗರ, ಆ.25- ದೇಶ ವಿರೋಧಿ ಮಾತುಗಳನ್ನಾಡುತ್ತಿರುವ ಆಮ್ನೆಸ್ಟಿ ಸಂಸ್ಥೆಯನ್ನು ಸರ್ಕಾರ ಕೂಡಲೇ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಪಟ್ಟಣದ ಬಿಜೆಪಿ ಕಚೇರಿಯಿಂದ ಹೊರಟ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರು ವಾಣಿ ವಿಲಾಸ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ತೆರಳಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದೇಶ ವಿರೋಧಿ ಹೇಳಿಕೆ ನೀಡುವಂತಹ ಸಂಘಟನೆಗಳನ್ನು ನಿಷೇಧಿಸುವುದರ ಜತೆಗೆ ಕಾಂಗ್ರೆಸ್ ಮುಖಂಡರು ಇಂತಹ ಸಂಘಟನೆಗಳನ್ನು ಪ್ರೊತ್ಸಾಹಿಸುವ ಪ್ರವೃತ್ತಿ ಬಿಡಬೇಕು ಎಂದು ಆಗ್ರಹಿಸಿದರು.

ಗೃಹ ಮಂತ್ರಿಗಳಿಗೆ ನಿಜವಾಗಿಯೂ ದೇಶದ ಬಗ್ಗೆ ಅಭಿಮಾನವಿದ್ದರೆ ದೇಶ ವಿರೋಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸವಾಲು ಹಾಕಿದರು.ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಮುಖಂಡರಾದ ಬಸ್‍ಕುಮಾರ್, ಶೀಧರಮೂರ್ತಿ, ಸಣ್ಣಪ್ಪ, ಮಲ್ಲಕಾರ್ಜುನಪ್ಪ, ಬೇಕರಿಉಮೇಶ್, ಬಾಲರಾಜ್, ಚೇತನ್‍ಕುಮಾರ್, ತಮ್ಮಣ್ಣ, ಮುಕ್ಕೋಟಿ, ಪರಶುರಾಮ್, ಶಿವಪ್ರಸಾದ್, ಸುರೇಶ್, ಆನಂದ, ಮಹೇಶ್, ರಾಜಶೇಖರ್, ರೇವಣ್ಣ, ಶ್ರೀನಿವಾಸಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin