‘ಆಮ್ ಆದ್ಮಿ’ ಪಕ್ಷದ ನಾಯಕ ಮನೆಯಲ್ಲಿ ಸಿಕ್ತು ಕಂತೆ ಕಂತೆ ಹಣ

ಈ ಸುದ್ದಿಯನ್ನು ಶೇರ್ ಮಾಡಿ

AAp-Min

ನವದೆಹಲಿ, ಆ.10-ತಾವೊಬ್ಬ ಆಮ್ ಆದ್ಮಿ, ನಮ್ಮದು ಜನ ಸಾಮಾನ್ಯರ ಪಕ್ಷ ಅಂತಾ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹೆಮ್ಮೆಪಡುತ್ತಾರೆ ಆದ್ರೆ ಆಮ್ ಆದ್ಮಿಯ ಕೆಲ ಶಾಸಕರಂತೂ ಕೋಟ್ಯಾಧೀಶರು.  ಆಪ್ ಶಾಸಕನ ಮನೆಯಲ್ಲಿ ಸುಲಭಕ್ಕೆ ಎಣಿಸಲಾಗದಷ್ಟು ಕಂತೆ ಕಂತೆ ಹಣ ಸಿಕ್ಕಿದೆ. ಶಾಸಕ ಕರ್ತಾರ್ ಸಿಂಗ್ ತನ್ವರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಈ ವೇಳೆ ಸುಮಾರು 130 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 1 ಕೋಟಿ ಮೌಲ್ಯದ ಚಿನ್ನ, ಎರಡು ಫಾರ್ಮï ಹೌಸï ಸೇರಿದಂತೆ ತನ್ವರ್ ಹೆಸರಲ್ಲಿ ಬೇನಾಮಿ ಆಸ್ತಿಯಿದೆ. ಭಾರೀ ಪ್ರಮಾಣದಲ್ಲಿ ನೋಟಿನ ಕಂತೆಗಳು ಕೂಡ ಸಿಕ್ಕಿವೆ.

ಆದ್ರೆ ಇದ್ಯಾವುದೂ ಅಕ್ರಮ ಆಸ್ತಿಯಲ್ಲ, ಕೇಂದ್ರ ಬಿಜೆಪಿ ಸರ್ಕಾರ ನಡೆಸ್ತಿರೋ ಪಿತೂರಿ ಅನ್ನೋದು ತನ್ವರï ಆರೋಪ. 2014 ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿದ್ದ ತನ್ವರ್, ಬಳಿಕ ಎಎಪಿ ಸೇರಿದ್ದರು. ಪಕ್ಷದ ಶಾಸಕನ ಮನೆಯಲ್ಲಿ ನೋಟಿನ ಕಂತೆಗಳ ರಾಶಿಯೇ ಸಿಕ್ಕಿರೋದು ಸಿಎಂ ಕೇಜ್ರಿವಾಲ್‍ಗೆ ಮುಜುಗರ ಉಂಟು ಮಾಡಿರೋದು ಸುಳ್ಳಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin