ಆಯುರ್ವೇದಕ್ಕೆ ಭವಿಷ್ಯದಲ್ಲಿ ಒಳ್ಳೆಯ ಶಕ್ತಿ ಇದೆ

ಈ ಸುದ್ದಿಯನ್ನು ಶೇರ್ ಮಾಡಿ

11

ಇಳಕಲ್,ಫೆ.5- ಅಲೋಪತಿ ಔಷದಿಗಿಂತಲೂ ಆಯುರ್ವೇದ ಔಷದ ಮುಂದಿನ ದಿನಗಳಲ್ಲಿ ಶಕ್ತಿಯುತವಾಗಿ ಬೆಳೆಯುತ್ತದೆ ಎಂದು ವಿಜಯಪುರದ ಬಿ.ಎಲ್. ಡಿ. ಇ. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಗುಗ್ರಿಗೌಡರ ಹೇಳಿದರು.ಅವರು ಮಹಾಂತ ಗಂಗೋತ್ರಿ ಆವರಣದ ಒಳ ಕ್ರೀಡಾಂಗಣದಲ್ಲಿ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ರಾಜೀವಗಾಂಧಿ ಆಯುರ್ವೇದಿಕ ವಿಶ್ವವಿದ್ಯಾನಿಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಆಯುರ್ವೀಜಯ- 2017 ಶಾಲಿಕ್ಯ ತಂತ್ರ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಸಿ.ಡಿ.ಸಿ.ಆರ್ ಮತ್ತು ಡಿ. ರಾಜೀವ ಗಾಂಧಿ ವಿಶ್ವ ವಿದ್ಯಾಲಯದ ನಿರ್ದೇಶಕ ಡಾ|| ಸಿದ್ದರಾಮೇಶ ಹರಸೂರ ಮಾತನಾಡಿ, ಆಯುರ್ವೇದ ಸಂಶೋಧನಕ್ಕೆ ಕಳೆದ ಸಲ 15 ಕೋಟಿ ರೂ. ನೀಡಿದ್ದು ಅದು ಸದುಪಯೋಗವಾಗಿದೆ. ಈ ಸಲ ಸರಕಾರ 18ರಿಂದ 20 ಕೋಟಿ ರೂ.ವನ್ನು ರಾಜೀವ ಗಾಂಧಿ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ನೀಡಬೇಕೆಂದು ಕೇಳಿಕೊಂಡರು.

ಇಲ್ಲಿಯು ಸಹ ಆಯುರ್ವೇದ ಸಂಶೋಧನ ಕೇಂದ್ರವಾಗಲಿ ಅದಕ್ಕೆ ತಮ್ಮ ಸಹಾಯ ಸಹಕಾರ ನೀಡುವುದಾಗಿ ಹೇಳಿ ಇಳಕಲ್ ಮೊದಲು ಸೀರೆಗೆ ನಂತರ ಗ್ರಾನೈಟ್‍ಗೆ ಹೆಸರುವಾಸಿ ಯಾದಂತೆ ಆಯುರ್ವೇದ ಸಂಶೋಧನೆಯಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.ಆಯುರ್ವೇದ, ಅಲೋಪತಿಕ್ ಮತ್ತು ಹೋಮಿಯೋಪತಿಕ್ ಇದರ ಬಗ್ಗೆ ಸರಕಾರಕ್ಕೆ ಯಾವುದೇ ಬೇಧ ಭಾವವಿಲ್ಲ ಎಲ್ಲವು ಜೊತೆ ಜೊತೆಯಾಗಿ ಬೆಳೆಯುತ್ತವೆ. ಯಾವುದು ಮನುಕುಲಕ್ಕೆ ಒಳಯದಾಗುತ್ತದೆ ಅದನ್ನು ಜನತೆಯು ಅಳವಡಿಸಿಕೊಳ್ಳುತ್ತಾರೆ ಎನ್ನುತ್ತಾ 2ಸಾವಿರ ವರ್ಷ ಇತಿಹಾಸ ಆಯುರ್ವೇದಕ್ಕೆ ಇದ್ದರೆ 200ವರ್ಷ ಇತಿಹಾಸ ಅಲೋಪತಿಗೆ ಇದೆ ಪ್ರಚಾರದಿಂದ ಬಳವಣಿಗೆ ಸಾದ್ಯ ಎಂದರು.ಆಯುರ್ವೇದಿಕ ಕಾಲೇಜ ಚೇರಮನ್ ವಿ.ವಿ.ಅಲೆಗಾವಿ, ಶರಣಪ್ಪ ಅಕ್ಕಿ, ಸಂಘದ ಚೇರಮನ್ ಎಮ್.ವ್ಹಿ. ಪಾಟೀಲ, ವ್ಹಾ. ಚೇರಮನ್ನ ಕೆ.ಎಸ್.ಕಂದಿಕೊಂಡ,ಉಪಾಧ್ಯಕ್ಷ ಮಹೇಶಪ್ಪ ಸಜ್ಜನರ, ಪ್ರಧಾನ ಕಾರ್ಯದರ್ಶಿ ಅಶೋಕ ಬಿಜ್ಜಲ, ರಾಜೀವ ಗಾಂಧಿ ಸೆನೆಟ್ ಸದಸ್ಯ ಡಾ|| ಪ್ರಕಾಶ ತಾರಿವಾಳ ಅತಿಥಿಗಳಾಗಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಗುರು ಮಹಾಂತಶ್ರೀಗಳು ಮಾತನಾಡಿ, ಸಂಶೋಧನೆಯಿಂದ ಜಗತ್ತಿನಲ್ಲಿಯೇ ಅಮೇರಿಕಾ ಮೊದಲನೆಯ ಸ್ಥಾನದಲ್ಲಿದೆ. ಅದಕ್ಕಾಗಿ ನಾವು ಸಂಶೋಧನೆಯಲ್ಲಿ ತೊಡಗಬೇಕು. ತಮ್ಮ ಸಂಘದಿಂದ ಪ್ರಯೋಗಾತ್ಮಕ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ನುಡಿದು ವಿದೇಶಿಯ ಅನುಕರಣೆಯಾದ ಶಾಂಪು ಹಚ್ಚಿಕೊಂಡು ಸ್ನಾನ ಮಾಡುವುದನ್ನು ಕೈಬಿಟ್ಟು ತಲೆಗೆ ಕೊಬ್ಬರಿ ಎಣೆ ಹಚಿಕೊಂಡು ಸಾನ್ನ ಮಾಡಿದರೆ ತಲೆಯು ಶಾಂತವಾಗಿರತ್ತದೆ, ಕಣ್ಣು ತಂಪಾಗುತ್ತದೆ ಎಂದರು.ಉದ್ಘಾಟಕರಾದ ಡಾ|| ಗುಗ್ರಿಗೌಡರ್, ಡಾ|| ಹರಸೂರ, ಅವರನ್ನು ಗುರು ಮಹಾಂತ ಶ್ರೀಗಳು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿ ಸತ್ಕರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin