ಆರದ ಕಾವೇರಿ ಕಿಚ್ಚು : ಮಂಡ್ಯ ಜಿಲ್ಲೆಯಲ್ಲಿ ಇಂದೂ ಶಾಲಾ, ಕಾಲೇಜುಗಳಿಗೆ ರಜೆ

ಈ ಸುದ್ದಿಯನ್ನು ಶೇರ್ ಮಾಡಿ
ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಶ್ಚಿಮಕಾರ್ಡ್ ರಸ್ತೆಯಲ್ಲಿ  ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಕನ್ನಡ ಪರ ಸಂಘಟನೆ  ಕಾರ್ಯಕರ್ತರು ಟೈರ್ ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೆಂಗಳೂರು, ಸೆ.10-ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಹೋರಾಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸಹ ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಳೆದ ಸೋಮವಾರದಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡಪರ ಸಂಘಟನೆಗಳು, ರೈತರು ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.ಈ ಹಿನ್ನೆಲೆ ಮಂಡ್ಯ ಜಿಲ್ಲೆಯ ಶಾಲಾಕಾಲೇಜುಗಳಿಗೆ ಇಂದು ಸಹ ರಜೆ ವಿಸ್ತರಣೆ ಮಾಡಲಾಗಿದೆ.ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಡ್ಯಾಂ ಸುತ್ತಮುತ್ತ ಬಿಗಿಭದ್ರತೆ ವಹಿಸಲಾಗಿದ್ದು,ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಕೆ.ಆರ್.ಎಸ್.ಉದ್ಯಾನವನಕ್ಕೆ ಪ್ರವಾಸಿಗರಿಗೂ ಪ್ರವೇಶ ನಿಷೇಧಿಸಲಾಗಿದೆ.

ಮುಂದುವರೆದ ಪ್ರತಿಭಟನೆ : 

ಸಾವಿರಾರು ರೈತರು ಮಂಡ್ಯದ ಸಂಜಯ್‍ನಗರದಲ್ಲಿ ಪ್ರತಿಭಟನೆ ನಡೆಸಿ, ನೀರನ್ನ ಬಂದ್ ಮಾಡುವಂತೆ ಆಗ್ರಹಿಸಿ ಕೆಆರೆಸ್‍ಗೆ ಮುತ್ತಿಗೆ ಯತ್ನ ನಡೆಸಿದ್ದರು. ಆದ್ರೆ, ಸರ್ಕಾರ ಪೆÇಲೀಸರ ಮೂಲಕ ಲಾಠಿಚಾರ್ಜ್ ನಡೆಸಿ ಹೋರಾಟ ಹತ್ತಿಕ್ಕಿತ್ತು. ಪೊಲೀಸರ ಈ ಲಾಠಿಚಾರ್ಜ್ ರೈತರನ್ನು ಮತ್ತಷ್ಟು ಕೆಣಕಿದೆ. ಹೀಗಾಗಿ, ಲಾಠಿಚಾರ್ಜ್ ಖಂಡಿಸಿ ಮಂಡ್ಯದಲ್ಲಿ ಇಂದೂ ಪ್ರತಿಭಟನೆ ಮುಂದುವರೆದಿದೆ. ಹೀಗಾಗಿ ಬೂದಿಮುಚ್ಚಿದ ಕೆಂಡದಂತಿರುವ ಮಂಡ್ಯದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮುಂಜಾಗೃತಾ ಕ್ರಮವಾಗಿ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇವತ್ತೂ ರಜೆ ನೀಡಲಾಗಿದೆ. ಇಡೀ ರಾಜ್ಯವೇ ಒಕ್ಕೊರಲಿನಿಂದ ಪ್ರತಿಭಟಿಸಿದರೂ ಕನ್ನಂಬಾಡಿಯಿಂದ ತಮಿಳುನಾಡಿಗೆ ನೀರು ಹರಿಯುತ್ತಲೇ ಇದೆ.

ಈ ಮಧ್ಯೆ ಇಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಿ. ಯಾರಿಗೂ ತೊಂದರೆ ಕೊಡಬೇಡಿ ಅಂತ ಹೋರಾಟಗಾರರಿಗೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಮನವಿ ಮಾಡಿದ್ದಾರೆ. ಕಳೆದ 2 ದಿನಗಳ ಹಿಂದೆ ಬಂಧಿತರಾಗಿದ್ದ ಕಾವೇರಿ ಹೋರಾಟಗಾರರಲ್ಲಿ 9 ಮಂದಿಗೆ ಮಂಡ್ಯ ಸೆಷನ್ ಕೋರ್ಟ್ ಜಾಮೀನು ನೀಡಿದೆ.
ಬಂದ್ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆಯಾದರೂ, ರೈತರ ಆಕ್ರೋಶ ಯಾವುದೇ ಸಮಯದಲ್ಲಿ ಭುಗಿಲೇಳುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ಅವರು ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆಸಿದ್ದಾರೆ. ಅಂತೆಯೇ ಮಂಡ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಒದಗಿಸಲಾಗಿರುವ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪ್ರಮುಖವಾಗಿ ಕೃಷ್ಣ ರಾಜ ಸಾಗರದ ಬೃಂದಾವನದ ಬಳಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.ಅಂತೆಯೇ ಸೆಪ್ಟೆಂಬರ್ 16ರವರೆಗೂ ಕೃಷ್ಣರಾಜ ಸಾಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ.
ನಿನ್ನೆ ಬಂದ್ ವೇಳೆ ಬೃಂದಾವನಕ್ಕೆ ನುಗ್ಗಿದ್ದ ಆಪಾರ ಪ್ರಮಾಣದ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಈ ವೇಳೆ ಆಕೋರ ಭರಿತ ರೈತರನ್ನು ನಿಯಂತ್ರಿಸಲು ಪೆÇಲೀಸರು ಲಾಠಿಚಾರ್ಜ್ ನಡೆಸಿದ್ದರು. ಪೊಲೀಸರ ಈ ಕ್ರಮ ತೀವ್ರ ಖಂಡನೆಗೆ ಗುರಿಯಾಗಿತ್ತು. ಈ ಸಂಬಂಧ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮಂಡ್ಯ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು, ರೈತರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಹೀಗಾಗಿ ಅವರನ್ನು ತಡೆಯಲು ಲಾಠಿಚಾರ್ಜ್ ಮಾಡಲಾಗಿತ್ತು. ಒಂದು ವೇಳೆ ಲಾಠಿ ಚಾರ್ಜ್ ಮಾಡದೇ ಹೋಗಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇತ್ತು ಎಂದು ಹೇಳಿದ್ದರು.

ಮಂಡ್ಯಕ್ಕೆ ವಾಟಾಳ್
ಕಾವೇರಿ ಜಲ ವಿವಾದ ಸಂಬಂಧ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಶನಿವಾರ ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳಲಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.  ನಿನ್ನೆ ನಡೆದ ಕರ್ನಾಟಕ ಬಂದ್ ವೇಳೆ ನಾಳೆ ಮಂಡ್ಯಕ್ಕೆ ತೆರಳುವುದಾಗಿ ಘೋಷಿಸಿದ್ದ ವಾಟಾಳ್ ನಾಗರಾಜ್ ಅವರು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದು, ಅವರೊಂದಿಗೆ ಸಾರಾಗೋವಿಂದು ಸೇರಿದಂತೆ ಹಲವು ಕನ್ನಡ ಪರ ಹೋರಾಟಗಾರರೂ ಕೂಡ ಮಂಡ್ಯಗೆ ಆಗಮಿಸುವ ಸಾಧ್ಯತೆ ಇದೆ. ಮಂಡ್ಯ ಭೈೀಟಿ ವೇಳೆ ಕನ್ನಡ ಪರನಾಯಕರು ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾರನ್ನು ಭೈೀಟಿ ಮಾಡಿ ಕಾವೇರಿ ವಿವಾದ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಅಂತೆಯೇ ಕಾವೇರಿ ವಿವಾದ ಸಂಬಂಧ ಮನವಿ ಕೂಡ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin