ಆರೋಗ್ಯದಿಂದಿರಲು ರಕ್ತದಾನ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

blod

ರಕ್ತದಾನದ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆ ಇದೆ. ರಕ್ತ ದಾನ ಮಾಡಿದರೆ ನನಗೆ ವೀಕ್‍ನೆಸ್ ಉಂಟಾಗಬಹುದು, ಕಾಯಿಲೆ ಬರಬಹುದು ಎಂಬ ಭಯವಿದೆ. ಆದರೆ ಸತ್ಯಾಂಶವೆನೆಂದರೆ ರಕ್ತದಾನ ಮಾಡಿದರೆ ನಿಮ್ಮ ಆರೋಗ್ಯ ಮತ್ತಷ್ಟು ವೃದ್ಧಿಸುವುದು! ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ರಕ್ತದಾನದಿಂದ ದೇಹದಲ್ಲಿ ಕಬ್ಬಿಣಾಂಶವನ್ನು ಸಮಪ್ರಮಾಣದಲ್ಲಿ ಇಡಬಹುದೆಂದು ತಿಳಿದು ಬಂದಿದೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೂ ಕಷ್ಟವೇ? ಅಧಿಕವಾದರೂ ಒಳ್ಳೆಯದಲ್ಲ. ರಕ್ತದಲ್ಲಿ ಕಬ್ಬಿಣಾಂಶ ಅಧಿಕವಾದರೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಮಹಿಳೆಯ ಮಟ್ಟು ದೇಹದಲ್ಲಿ ಕಬ್ಬಿಣಾಂಶ ಸರಿಯಾದ ರೀತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ.   ರಕ್ತದಾನ ಮಾಡುವ ಮುನ್ನ ವೈದ್ಯರು ನಮ್ಮ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ನಮ್ಮಲ್ಲಿ ನಮಗೆ ತಿಳಿಯದೇ ಏನಾದರೂ ಕಾಯಿಲೆ ಇದ್ದರೆ ಆಗ ನಮಗೆ ತಿಳಿದು ಬರುವ ಸಾಧ್ಯತೆ ಇದೆ. ನಮ್ಮ ರಕ್ತದಾನಕ್ಕೆ ವೈದ್ಯರು ಒಪ್ಪಿದರೆ ನಾವು ಆರೋಗ್ಯವಂತರು ಎಂದು ತಿಳಿದು ಸಂತೋಷ ಉಂಟಾಗುವುದು.

ದೇಹದಲ್ಲಿ ಕಬ್ಬಿಣಾಂಶ ಸಮಾನ ಪ್ರಮಾಣದಲ್ಲಿದ್ದರೆ ಗಂಟಲಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ: ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಕೊಲೆಸ್ಟ್ರಾಲ್ ಕಾಯಿಲೆ ಬರುತ್ತದೆ. ರಕ್ತದಾನ ಮಾಡುವುದರಿಂದ ಮಧುಮೇಹ ಬರದಂತೆ ತಡೆಯಬಹುದು. ರಕ್ತ ಉತ್ಪತ್ತಿಗೆ ಸಹಾಯ ಮಾಡುತ್ತೆ: ರಕ್ತದಾನ ಮಾಡಿದಾಗ ಆ ರಕ್ತ ಮರುಭರ್ತಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇವು ಒಂದು ವೇಳೆ ನಿಮಗೆ ಗಾಯವಾಗಿ ಹೆಚ್ಚು ರಕ್ತ ಹೋದರೆ ಬೇಗನೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ನಿಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತೆ ಮಾಡುತ್ತದೆ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ತೃಪ್ತಿ ಜೊತೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ರಕ್ತದಾನಕ್ಕೆ ಹೊರಡುವ ಮುನ್ನ :

ರಕ್ತದಾನಕ್ಕೆ ಕನಿಷ್ಠ ಮೂರು ಘಂಟೆಗಳ ಮುನ್ನ ಚೆನ್ನಾಗಿ ಆಹಾರ ಸೇವನೆ ಮಾಡಿ.  ದಾನದ ನಂತರ ನಿಮಗೆ ನೀಡಲಾಗುವ ತಿಂಡಿಯನ್ನು ಸ್ವೀಕರಿಸಿ. ಅದನ್ನು ತೆಗೆದುಕೊಳ್ಳುವುದು ನಿಮಗೆ ತುಂಬಾ ಅಗತ್ಯ. ನಂತರ ಸರಿಯಾದ ಆಹಾರ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.  ರಕ್ತದಾನದ ಮುನ್ನಾ ದಿನ ಹೊಗೆಬತ್ತಿ/ ಸಿಗರೇಟು ಸೇವನೆಯನ್ನು ದೂರವಿಡಿ. ರಕ್ತದಾನ ಮಾಡಿದ ಮೂರು ಘಂಟೆಗಳ ನಂತರ ಸಿಗರೇಟು ಸೇವನೆ ಮಾಡಬಹುದಾಗಿದೆ. ರಕ್ತದಾನಕ್ಕೆ 48 ಘಂಟೆಗಳ ಮುಂಚೆ ಮದ್ಯಪಾನ ಮಾಡಿದ್ದಲ್ಲಿ ನೀವು ರಕ್ತದಾನಕ್ಕೆ ಅನರ್ಹರಾಗಿರುತ್ತೀರಿ.

Facebook Comments

Sri Raghav

Admin