ಆರೋಗ್ಯವೇ ಬಹುದೊಡ್ಡ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

15668ca487c39a9766409301eec98072_Mದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ.  ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ವೆನ್ನುವುದು. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದು ಭಾವಿಸುವುದು ದಡ್ಡತನÀ. ಏಕೆಂದರೆ ಕೋಟಿಗಟ್ಟಲೆ ಆಸ್ತಿ ಮಾಡಿದ ಎಷ್ಟೋ ಜನರು ಅನ್ನ ತಿನ್ನಲಾಗದೇ ಪರಿತಪಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಅಕ್ಕಿ ಕೊಳ್ಳಲು ಶಕ್ತಿ ಇಲ್ಲ ಎಂದರ್ಥವಲ್ಲ. ಅವರಿಗಂಟಿಕೊಂಡ ಮಧುಮೇಹ, ರಕ್ತದೊತ್ತಡದಂತಹ ‘ಶ್ರೀಮಂತ’ ಕಾಯಿಲೆಗಳು. ಮಧುಮೇಹದಂತಹ ಕಾಯಿಲೆಗಳಿಗೆ ಶ್ರೀಮಂತರೆಂದರೆ ಅದೇಕೋ ತುಂಬಾ ಇಷ್ಟ. ಎಷ್ಟು ಅಂದರೆ ತಮ್ಮದೇ ಬರ್ತ್‍ಡೇಗೆ ತಾವೇ ಒಂದು ಸ್ವೀಟ್ ತಿನ್ನಲಾಗದಷ್ಟು ದುಸ್ಥಿತಿ ಅವರಿಗೆ ಬಂದೊದಗಿರುತ್ತದೆ.

ಹೆಚ್ಚು ಮಾಧುಮೇಹ ಕಾಯಿಲೆಗೆ ತುತ್ತಾದವರೆಲ್ಲ ಶ್ರೀಮಂತರೇ? ಕಾರಣ ಏನು? ಏಕೆ? ಹೇಗೇ? ಎಂದು ಯೋಚಿಸುತ್ತಿರುವಿರಾ?

ಪ್ರತಿಯೊಬ್ಬರಿಗೂ ಹಣ, ಆಸ್ತಿ, ಸಂಪತ್ತು ಅಗತ್ಯ. ಅಗತ್ಯಕ್ಕೆ ತಕ್ಕಷ್ಟಿದ್ದರೆ ಅದು ನಮ್ಮನ್ನು ಕಾಪಾಡುತ್ತದೆ. ಅಗತ್ಯ ಮೀರಿದರೆ ಅದನ್ನೇ ನಾವು ಕಾಪಾಡಬೇಕಾಗುತ್ತದೆ. ಪ್ರತಿಯೊಬ್ಬರೂ ದುಡ್ಡು ಸಂಪಾದಿಸಬಹುದು. ಆದರೆ ಆರೋಗ್ಯ ಸಂಪಾದಿಸುವುದು ದುಡ್ಡು ಸಂಪಾದಿಸುವುದಕ್ಕಿಂತ ಕಷ್ಟ. ಬ್ಯುಸಿನೆಸ್‍ನಲ್ಲಿ ನಷ್ಟವಾದರೇ ಹೇಗೂ ಮತ್ತೆ ಸರಿದೂಗಿಸಿಕೊಳ್ಳಬಹುದು. ಆದರೆ ಆರೋಗ್ಯದಲ್ಲಿ ನಷ್ಟವಾದರೆ ಸರಿದೂಗಿಸುವುದು ಸುಲಭದ ಮಾತಲ್ಲ. ಅದೃಷ್ಟ ಕೆಟ್ಟದಾಗಿದ್ದರೆ ಎಷ್ಟು ಹಣವಿದ್ದು ಏನು ಪ್ರಯೋಜನ ಅಲ್ಲವೇ?

ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಹಣ ಸಂಪಾದಿಸುವ ಭರದಲ್ಲಿ ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಆರೋಗ್ಯದ ಕಡೆ ಗಮನಕೊಡದೆ ರಾತ್ರಿ ಹಗಲುಗಳೆನ್ನದೇ ದುಡ್ಡು ದುಡ್ಡು ದುಡ್ಡು ಎಂದು ದುಡ್ಡಿನ ಹಿಂದೆ ರೇಸ್‍ಗೆ ಬಿದ್ದವರಂತೇ ಓಡುತ್ತಿದ್ದೇವೆ. ಆದರೆ, ಈ ಓಟದಲ್ಲಿ ನಮಗೆ ಒಂದು ಹಂತದಲ್ಲಿ ಜಯ ಸಿಕ್ಕರೂ ಇನ್ನೊಂದೆಡೆ ನಮ್ಮ ಆರೋಗ್ಯವನ್ನು ಬಲಿ ಕೊಟ್ಟು ಸಂಪೂರ್ಣವಾಗಿ ಸೋತು ಹೋಗಿರುತ್ತೇವೆ. ಒತ್ತಡದ ಮಧ್ಯೆ ಕೆಲಸ ಮಾಡುವಾಗ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಇಲ್ಲದಿದ್ದರೆ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಆರೋಗ್ಯವೇ ಕಿತ್ತುಕೊಂಡು ನಿಮ್ಮ ಜೀವನಕ್ಕೆ ಜಿಗುಪ್ಸೆ ಎಂಬ ಉಡುಗೊರೆಯನ್ನು ನೀಡಿಬಿಡುತ್ತದೆ.
ಹೀಗೆ ದಿನನಿತ್ಯದ ನಿಮ್ಮ ಕಾರ್ಯಚಟುವಟಿಗೆಳಲ್ಲಿ ನೀಮಗೇ ಗೊತ್ತಾಗದೇ ಅನೇಕ ಬದಲಾವಣೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಈ ಲಕ್ಷಣಗಳೇ ಹೈಪರ್  ಆಕ್ಟಿವ್  ಡಿಸಾರ್ಡರ್ [(Attention         Deficit Hyperactivity Disorder (ADHD) ]    ಎಂಬ ಖಾಯಿಲೆಗೆ ದಾರಿ ಮಾಡಿಕೊಡುತ್ತವೆ.  ಹಾಗಾದರೆ ಈಗ ನೀಮ್ಮ ಆರೋಗ್ಯ ಯಾವ ಹಂತದಲ್ಲಿದೆ. ಹಣ ಸಂಪಾದಿಸುವ ರೇಸ್‍ನಲ್ಲಿ ನಿಮ್ಮ ಆರೋಗ್ಯ ಮುಂದಿದೆಯಾ ಅಥವಾ ನೀವು ಸಂಪಾದಿಸಿದ ಆಸ್ತಿ ಮುಂದಿದೆಯಾ ಎಂದು ತಿಳಿದುಕೊಳ್ಳಬೇಕೇ?  ಈ ಕೆಳಗಿನ ಲಕ್ಷಣಗಳನ್ನೊಮ್ಮೆ ನಿಮ್ಮ ಪ್ರ್ರತಿನಿತ್ಯದ ಬದುಕಿಗೆ ಹೋಲಿಕೆ ಮಾಡಿಕೊಳ್ಳಿ. ನಿಮ್ಮ  ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು.

ತನ್ನ ವಸ್ತುಗಳನ್ನು ಕಳೆದು ಹಾಕಿ ಹುಡುಕುವುದು:

ಈ ವ್ಯಕ್ತಿ ತನ್ನ ವಸ್ತುಗಳನ್ನು ಒಂದು ಕಡೆ ಇಡುವುದಿಲ್ಲ, ನಂತರ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂದು ನೆನಪಾಗದೆ ತುಂಬಾ ಹುಡುಕುತ್ತಾರೆ, ಆ ವಸ್ತು ಸಿಕ್ಕಿದ ಮೇಲೆ ಮತ್ತೆ ಅದನ್ನು ಜೋಪಾನವಾಗಿ ಇಡುವುದಿಲ್ಲ, ಬೇಕಾ ಬಿಟ್ಟಿ ಇಡುತ್ತಾರೆ.

ಎಲ್ಲ ವಿಷಯ ದಲ್ಲಿಯೂ ನಿರ್ಲಕ್ಷ್ಯ ತೋರುವುದು :
ತಮ್ಮ ಪರ್ಸನಲï ವಿಷಯ ಮಾತ್ರವಲ್ಲ, ಯಾವುದಾದರು ಮೀಟಿಂಗ್, ಫಂಕ್ಷನ್‍ಗೆ ಹೋಗುವುದಾದರೆ ತಡ ಮಾಡಿ ಹೋಗುವುದು  ಇವೆಲ್ಲಾ ಅವರ
ಅಭ್ಯಾಸವಾಗಿರುತ್ತದೆ.

ಕೆಲಸವನ್ನು ಪ್ರಾರಂಭಿಸಲು ಹಿಂದೇಟು :
ಕೆಲಸವನ್ನು ಬೇಗ ಮಾಡಿಕೊಂಡು ಮುಗಿಸಬೇಕೆಂಬ ಮನೋಭಾವ ಅವರಲ್ಲಿ ಇರುವುದಿಲ್ಲ, ಅರ್ಧ ಗಂಟೆಯಲ್ಲಿ ಮುಗಿಸುವ ಕೆಲಸಕ್ಕೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಾರೆ ಹಾಗೂ ಅದಕ್ಕೆ ಕಾರಣಗಳನ್ನೂ ನೀಡುತ್ತಾರೆ.

ತಮ್ಮ ಸರದಿಗಾಗಿ ಕಾಯುವ ತಾಳ್ಮೆ ಇರುವುದಿಲ್ಲ:  
ಈ ವ್ಯಕ್ತಿ ಸೂಪರ್ ಮಾರ್ಕೆಟ್‍ಗೆ ಹೋದರು ಅಂದಿಟ್ಟುಕೊಳ್ಳಿ, ಅಲ್ಲಿ ಬಿಲï ಪಾವತಿಗೆ ಉದ್ದದ ಕ್ಯೂ ಇದ್ದರೆ ತಮ್ಮ ಸರದಿ ಬರುವವರೆಗೆ ಕಾಯುವಷ್ಟು ತಾಳ್ಮೆ ಇವರಲ್ಲಿ ಇರುವುದಿಲ್ಲ, ಅಲ್ಲಿ ಎಲ್ಲರನ್ನು ತಳ್ಳಿ ಮುಂದೆ ಹೋಗಿ ಬಿಲï ಪಾವತಿ ಮಾಡುವುದು ಹೀಗೆ ಏನಾದರೂಂದು ಮಾಡಿ ಜನರು ಇವರತ್ತ ವಿಚಿತ್ರವಾಗಿ ನೋಡು ವಂತಾಗುವುದು.

ಚಂಚಲ ಸ್ವಭಾವ :
ಅವರ ಸ್ವಭಾವದಲ್ಲಿ ತುಂಬಾ ಚಂಚಲತೆ ಇರುತ್ತದೆ. ಕಾಲಿಂಗ್ ಬೆಲï, ಫೆÇೀನ್ ರಿಂಗ್, ಟ್ರಾಫಿಕ್ ಶಬ್ದ ಇವುಗಳೆಲ್ಲಾ ಅವರನ್ನು ತುಂಬಾ ಡಿಸ್ಟರ್ಬ ಮಾಡುತ್ತದೆ, ಇವುಗಳನ್ನು ಕೇಳಿದರೆ ಮನಸ್ಸು ಚಂಚಲವಾಗಿ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ.  ಯಾರಾದರೂ ಏನಾದರೂ ಮಾತನಾಡುತ್ತಿದ್ದರೆ ಪೂರ್ಣವಾಗಿ ಕೇಳಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ಅವರ ಮಾತನ್ನು ತುಂಡರಿಸಿ ತಾವು ಮಧ್ಯದಲ್ಲಿ ಬಾಯಿ ಹಾಕುತ್ತಾರೆ.

ತಾಳ್ಮೆಯೇ ಇಲ್ಲದಿರುವುದು:
ಆ ವ್ಯಕ್ತಿ ಸಮಧಾನದಿಂದ ಕುಳಿತು ಒಂದು ಕಪ್ ಕಾಫಿ ಕೂಡ ಕುಡಿಯುವುದಿಲ್ಲ, ಕೈ ಕಾಲುಗಳನ್ನು ಕುಣಿಸುವುದು ಹೀಗೆ ಏನೋ ಒಂದು ಮಾಡುತ್ತಾ ಬ್ಯುಸಿಯಾಗಿರುತ್ತಾರೆ.

ಶುಚಿತ್ವದ ಕಡೆ ಗಮನ ಕೊಡುವುದಿಲ್ಲ:
ತಮ್ಮ ವಸ್ತುಗಳನ್ನು ನೀಟಾಗಿ ಇಡುವುದಿಲ್ಲ, ಶುಚಿತ್ವದ ಕಡೆಗೆ ಗಮನ ಕೊಡುವುದಿಲ್ಲ. ಹೈಪರ್ ಆಕ್ಟಿವ್ ಕಾಯಿಲೆ ಇರುವವರು ತಮ್ಮ ವಸ್ತುಗಳನ್ನು ನೀಟಾಗಿ ಇಡುವುದಿಲ್ಲ.

ಇದ್ದಕ್ಕಿದ್ದಂತೆ ಕೋಪಗೊಳ್ಳುವುದು:
ಹೈಪರ್ ಆಕ್ಟಿವ್ ಕಾಯಿಲೆ ಇರುವ ವ್ಯಕ್ತಿಗೆ ಬೇಗನೆ ಕೋಪ  ಬರುತ್ತದೆ, ಆದರೆ ನಾವು ಅವರಲ್ಲಿ  ಕಾಯಿಲೆ ಇದೆ ಎಂದು  ಗುರುತಿಸುವ ಬದಲು ಮುಂಗೋಪಿ ಎಂದೇ  ತಿಳಿಯುತ್ತೇವೆ.

Facebook Comments

Leave a Comments