ಆರೋಗ್ಯ ವಿಮೆಯಿಂದ ಕುಟುಂಬದ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

channapatanna-0

ಚನ್ನಪಟ್ಟಣ, ಆ.19- ಪ್ರತಿಯೊಬ್ಬರು ಆರೋಗ್ಯ ವಿಮೆ ಮಾಡಿಸಿದರೆ ಕುಟುಂಬ ಭದ್ರತೆಯಿಂದ ಕೂಡಿರುತ್ತದೆ. ಯಾವ ಸಮಯದಲ್ಲಿ ಏನಾಗುತ್ತದೋ ಎಂಬ ಅರಿವಿಲ್ಲದಿರುವುದರಿಂದ ಆರೋಗ್ಯ ವಿಮಾ ಯೋಜನೆ ಪ್ರತಿಯೊಬ್ಬರಿಗೂ ಸಹಕಾರಿಯಾಗುತ್ತದೆ ಎಂದು ಲೀವ್ ಇಂಡಿಯಾ ಸಂಸ್ಥೆಯ ಆರ್ ಎಂ. ಕಾಮೇಶ್ವರ್ ತಿಳಿಸಿದರು.ದೃಷ್ಟಿ ಮತ್ತು ಪುಣ್ಯ ಆಸ್ಪತ್ರೆ ಮತ್ತು ವಿನಾಯಕ ಹೆಲ್ತ್ ಕೇರ್ ಸೆಂಟರ್ ಸಹಕಾರದಿಂದ ದಿ ಲೀವ್ ಇಂಡಿಯಾ ಇನ್ಸುರೆನ್ಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿgದಲ್ಲಿ ಮಾತನಾಡಿದರು.

ಆರೋಗ್ಯ ವಿಮಾ ಯೋಜನೆಗಳಿಂದ ಅನೇಕ ಉಪಯೋಗಗಳಿದ್ದು, ಈ ಉಪಯೋಗವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕಿದೆ. ನಮ್ಮ ಸಂಸ್ಥೆ ಇನ್ನು ಹೆಚ್ಚಿನ ವಿಮಾ ಯೋಜನೆಗಳನ್ನು ರೂಪಿಸಲಿದೆ ಎಂದರು.ಈ ಸಂದರ್ಭದಲ್ಲಿ ಸುಮಾರು 100 ಮಂದಿಗೆ ಇಸಿಜಿ, ಕಣ್ಣಿನ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ನಡೆಯಲಾಯಿತು.ಶಾಖಾ ವ್ಯವಸ್ಥಾಪಕರಾದ ಕೆ.ವಿ.ವೆಂಕಟೇಶ್, ರಾಮೇಗೌಡ, ರಾಘವೇಂದ್ರಮಯ್ಯ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin