ಆರೋಗ್ಯ ವೃದ್ಧಿಗೆ ಬೇಕು ಕರಿಬೇವು ಎಂಬ ಸಂಜೀವಿನಿ

ಈ ಸುದ್ದಿಯನ್ನು ಶೇರ್ ಮಾಡಿ

agdSDGSGH

ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ.ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ಒಗ್ಗರಣೆಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ. ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ.  ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅದಲ್ಲದೆ ವಾಂತಿ ಬರುವಂತಾಗುವಿಕೆ ಮತ್ತು ಅಜೀರ್ಣವನ್ನು ಸಹ ನಿವಾರಿಸುತ್ತದೆ. ಏಕೆಂದರೆ ಪಿತ್ತ ಹೆಚ್ಚಾಗಿದ್ದಲ್ಲಿ ನಾಸಿಯಾ ಮತ್ತು ಅಜೀರ್ಣ ಉಂಟಾಗುತ್ತದೆ. ಇದರಲ್ಲಿ ಅಲ್ಕಾಲಾಯ್ಡ್ ಕಾರ್ಬಾಜೋಲ್ ಇದ್ದು, ಅದು ಉರಿಬಾವು ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಹೊಟ್ಟೆ ತೊಳೆಸುವಿಕೆಯಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ  ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.  ಕೆಲವೊಮ್ಮೆ ಅಜೀರ್ಣವಾದ ಕಾರಣ ಹಲವು  ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿ ತರಿಸುತ್ತವೆ. ಇಂತಹ ಸಮಯದಲ್ಲಿ ಕರಿಬೇವನ್ನು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾದರಿಯಲ್ಲಿ ತಯಾರಿಸಿ ಕುಡಿದರೆ ತಕ್ಷಣ ಎದೆಯಲ್ಲಿ  ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡುವ ಅಥವಾ ಬೆಳಗಿನ ಜಾವ ಎದ್ದಾಕ್ಷಣ ವಾಕರಿಕೆ. ಅಥವಾ ವಾಂತಿಯ ತೊಂದರೆ ಕಂಡುಬರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ. ಕಿಡ್ನಿ ಕಲ್ಲು ಗಳು ಬೆಳೆಯದಂತೆ ತಡೆಯುತ್ತದೆ :  ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇವು ಇರುವಂತೆ ನೋಡಿಕೊಳ್ಳುವ ಮೂಲಕ ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯಬಹುದು. ಹೆಚ್ಚಿನ ತÉೂಂದರೆ ಕಂಡುಬಂದಲ್ಲಿ ಕರಿಬೇವಿನ  ಎಲೆಗಳ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತವೆ. ಕೂದಲುಗಳ ಬೆಳವಣಿಗೆ : ಸಾಮಾನ್ಯವಾಗಿ ಹೆಣ್ನುಮಕ್ಕಳು ಉದ್ದನೆಯ ಕೂದಲಿಗಾಗಿ ಇನ್ನಿಲ್ಲದ ಪ್ರಯೋಗಳನ್ನು ಮಾಡುತ್ತಿರುತ್ತಾರೆ, ನಾನಾ ಬಗೆಯ ಶಾಂಪೂ, ಹಾಗೂ ತೈಲಗಳನ್ನು ಬಳಸುತ್ತಿರುತ್ತಾರೆ. ನಿಮಗೆ ಆಶ್ಚರ್ಯವಾಗುವ ವಿಷಯವೇನೆಂದರೆ ಊಟದಲ್ಲಿ ಹಾಗೂ ನೇರವಾಗಿ ಹೆಚ್ಚು ಕರಿಬೇಕು ಸೇವನೆಯಿಂದ ಸದೃಢವಾದ ಮತ್ತು ಉದ್ದನೆಯ ಕೂದಲುಗಳ ಬೆಳವಣಿಗೆಯಾಗುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

Facebook Comments

Sri Raghav

Admin