ಆರೋಪಗಳಿಗೆ ಪ್ರತಿಕ್ರಿಯಿಸಲ್ಲ : ನರೇಂದ್ರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

MANAVALI--RIVER

ಮಳವಳ್ಳಿ, ಆ.26- ಹಿಂದೆ ಕೆರೆಗಳನ್ನು ಹೂಳೆತ್ತುವ ನೆಪದಲ್ಲಿ ಮಣ್ಣುಗುಡ್ಡೆಗಳನ್ನು ತೋರಿಸಿ ಸುಳ್ಳು ಬಿಲ್ ಮಾಡಿ ಹಣ ಕೊಳ್ಳೆ ಹೊಡೆದ ಮಂದಿ ಇಂದು ತಾಂತ್ರಿಕತೆಯ ಅರಿವಿಲ್ಲದೆ ಮಳವಳ್ಳಿ ಹಾಗೂ ಮಾರೇಹಳ್ಳಿ ಕೆರೆ ಕಾಮಗಾರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಈ ಆರೋಪಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದ್ದಾರೆ. ಪಟ್ಟಣದ ಕೆರೆಯಂಗಳದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆರೆ ಅಭಿವೃದ್ಧಿ ಕುರಿತು ನಾನು ಸರ್ಕಾರದ ಪ್ರತಿನಿಧಿಯಾಗಿ ಜನರಿಗೆ ಮಾತ್ರ ಉತ್ತರ ನೀಡಬೇಕೆ ಹೊರತು ಅಭಿವೃದ್ದಿ ಕಾರ್ಯವನ್ನು ಸಹಿಸದೆ ಹಾದಿಬೀದಿಯಲ್ಲಿ ನಿಂತು ಸುಳ್ಳು ಆರೋಪ ಮಾಡುವವರ ಬಗ್ಗೆ ತಲೆಕೆಡಿಕೊಳ್ಳುವುದಿಲ್ಲ ಎಂದು ಮಾಜಿ ಶಾಸಕ ಡಾ.ಅನ್ನದಾನಿ ಅವರ ಆರೋಪಕ್ಕೆ ಪರೋಕ್ಷ ತಿರುಗೇಟು ನೀಡಿದರು.
ಒಟ್ಟು 4.95 ಕೋಟಿ ವೆಚ್ಚದಲ್ಲಿ ಕೆರೆಯ ಹೂಳೆತ್ತುವುದರ ಜೊತೆಗೆ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವ ಮೂಲಕ ಪಟ್ಟಣದ ಸೌಂದರ್ಯ ವೃದ್ದಿಗೆ ಒತ್ತು ನೀಡಲಾಗಿದೆ ಎಂದ ಅವರು, ನಡುಗಡ್ಡೆ ನಿರ್ಮಾಣದಿಂದ ಕೆರೆಯಲ್ಲಿ ನೀರಿನ ಸಂಗ್ರಹ ಸಾಮಥ್ರ್ಯ ಹೆಚ್ಚಾಗಿದೆಯೇ ಹೊರತು ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಹೂಳೆತ್ತುವ ಕಾರ್ಯ ಒಂದು ವಾರದಲ್ಲಿ ಮುಗಿದರೂ ಸಹ ಉಳಿದ ಅಭಿವೃದ್ದಿ ಕಾರ್ಯಗಳು 2-3 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಹೂಳೆತ್ತುವ ಕಾರ್ಯ ಮುಗಿದಕೂಡಲೇ ಕೆಆರ್‍ಎಸ್ ನಿಂದ ನೀರು ದೊರೆತಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ದಯಮಾಡಿ ಮಳವಳ್ಳಿ ಭಾಗದ ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡು ನಾಲಾ ಮೇಲ್ಬಾಗದಲ್ಲಿ ನಡೆಯುತ್ತಿರುವ ನೀರಿನ ಅಕ್ರಮ ಬಳಕೆಯನ್ನು ನಿಲ್ಲಿಸಿ ಈ ಭಾಗದ ಜನರಿಗೂ ನೀರು ನೀಡಬೇಕೆಂದು ಅವರು ಮನವಿ ಮಾಡಿದರು.
ತಾಪಂ ಅಧ್ಯಕ್ಷ ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜೆ ದೇವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ತಾಪಂ ಸದಸ್ಯರಾದ ದಾಸನದೊಡ್ಡಿ ಪುಟ್ಟಸ್ವಾಮಿ, ನಾಗೇಶ್, ಗಂಗರಾಜು ಅರಸ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನಸ್ಚಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin