ಸಾರ್ವಜನಿಕರೇ ಹಣ ಕೂಡಿಸಿ ಪ್ರೇಮಿಗಳ ಮದುವೆ ಮಾಡಿಸಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Marriage--01

ಕೆಆರ್ ನಗರ, ಫೆ.8- ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳನ್ನು ಆಂಜನೇಯ ಬಡಾವಣೆ ನಾಗರೀಕರು ಒಟ್ಟಾಗಿ ಸೇರಿ ಮದುವೆ ಮಾಡಿಸಿ ಹೃದಯ ವೈಶಾಲ್ಯತೆ ಮರೆದಿದ್ದಾರೆ. ಇಲ್ಲಿನ 7ನೆ ವಾರ್ಡ್ ನಿವಾಸಿಗಳಾದ ರಾಮದೀಪು ಮತ್ತು ಗಿರಿಜಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರಿಗೂ ತಂದೆ ಇರಲಿಲ್ಲ. ಜತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು.  ಇದನ್ನು ಅರಿತ ಬಡಾವಣೆ ನಿವಾಸಿಗಳು ಒಂದೆಡೆ ಸೇರಿ ಚರ್ಚಿಸಿ ತಾವುಗಳೆ ಮುಂದೆ ನಿಂತು ಖರ್ಚು ಹಾಕಿ ಪಟ್ಟಣದ ಹೊರ ವಲಯದಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಮದುವೆ ಮಾಡಿಸಿದರು.

ಜಿಪಂ ವಿಪಕ್ಷ ನಾಯಕ ಡಿ.ರವಿಶಂಕರ್ ವಧು ಗಿರಿಜಾಳಿಗೆ ಓಲೆಯನ್ನು ಕೊಡುಗೆಯಾಗಿ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ಇವರಿಬ್ಬರ ಜೀವನ ನಿರ್ವಹಣೆಗೆ ಸರ್ಕಾರದಿಂದ ಅನುಕೂಲ ಮಾಡಿಸುವುದರ ಜತೆಗೆ ವೈಯುಕ್ತಿಕವಾಗಿಯೂ ಧನ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.ಆಂಜನೇಯ ಬಡಾವಣೆ ನಾಗರೀಕರು ಬಡ ಪ್ರೇಮಿಗಳನ್ನು ಒಂದು ಮಾಡಿ ಸರಳವಾಗಿ ಮದುವೆ ಮಾಡಿಸಿದ್ದನ್ನು ದೇವಾಲಯಕ್ಕೆ ಬಂದಿದ್ದ ನೂರಾರು ಭಕ್ತರು ಮುಕ್ತ ಕಂಠದಿಂದ ಶ್ಲಾಘಿಸಿ ನೂತನ ವಧು-ವರರಿಗೆ ಆಶೀರ್ವದಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಕೆ.ಎಲ್.ಕುಮಾರ್. ಉಮೇಶ್. ಧರ್ಮರಾಜು, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಪುರಸಭಾ ಸದಸ್ಯ ಎಸ್.ಯೋಗಾನಂದ,ಕೆ.ಎಲ್.ಕುಮಾರ್, ಜೆಡಿಎಸ್ ಮುಖಂಡ ಸಂತೋಷ್‍ಗೌಡ, ಮುಖಂಡರಾದ ಬೋರನಾಯಕ, ನಾಗರಾಜು, ಅಶೋಕ್, ನಾಗಣ್ಣ, ಶ್ರೀನಿವಾಸ್, ನಾರಾಯಣ, ನಾಗೇಶ್, ಕೆ.ಎನ್.ಮಂಜುನಾಥ್, ರುಕ್ಕಮ್ಮ, ಜ್ಯೋತಿ, ನಾಗಮ್ಮ, ಕುಮಾರಿ ಇದ್ದರು.

Facebook Comments

Sri Raghav

Admin