ಆರ್ಯವೈಶ್ಯ ಜನಾಂಗ ಜಾತಿ ಪಟ್ಟಿ ಸೇರ್ಪಡೆಗೆ ಒತ್ತಾಯಿಸಿ ಬೈಕ್ ರ್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

13

ಗದಗ,ಮಾ.15- ನಗರದ ಆರ್ಯವೈಶ್ಯ ಜನಾಂಗದ ಹೆಸರನ್ನು ರಾಜ್ಯ ಸರಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡಿಸಬೇಕು ಎಂದು ಒತ್ತಾಯಿಸಿ ಬೈಕ್ ರ್ಯಾಲಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಸಮಾಜದವರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎನ್. ರಾಮರಾವ್ ಮಾತನಾಡಿ, ಕರ್ನಾಟಕದ ರಾಜ್ಯದಲ್ಲಿ ಶತಶತಮಾನಗಳಿಂದ ನೆಲೆಸಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತನು, ಮನ, ಧನಗಳ ಸೇವೆಯನ್ನು ಸಲ್ಲಿಸುತ್ತಿರುವ ಅತ್ಯಂತ ಸಂಯಮದ ಆರ್ಯವೈಶ್ಯ ಬಂಧುಗಳು. ಹೀಗಾಗಿ ರಾಜ್ಯದ ಸರಕಾರದ ಪಟ್ಟಿಯಲ್ಲಿ ಸೇರಬೇಕು ಎಂದರು.

ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳು ನಗರದ ನಗರೇಶ್ವರ ದೇವಸ್ಥಾನದಿಂದ ಟಾಂಗಾಕೂಟ, ಮಹೇಂದ್ರಕರ ಸರ್ಕಲ್, ಗಾಂಧಿ ಸರ್ಕಲ್, ಭೂಮರಡ್ಡಿ ಸರ್ಕಲ್, ಮುಳಗುಂದ ನಾಕಾದ ಮುಖಾಂತರ 150ಕ್ಕೂ ಹೆಚ್ಚು ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳ ಮುಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ವೀರಣ್ಣ ಟಿ. ಹೇಮಾದ್ರಿ, ಕಾರ್ಯದರ್ಶಿ ಕೃಷ್ಣರಾಜ ಎನ್. ಹೆಬಸೂರ, ಸಹ ಕಾರ್ಯದರ್ಶಿ ಶ್ರೀನಿವಾಸ ಕುಷ್ಟಗಿ, ವಾಸುದೇವ ಡಿ. ಕುಷ್ಟಗಿ, ಗೋವಿಂದರಾಜ ವಿ. ಕುಷ್ಟಗಿ, ವಾಸುದೇವ ಎನ್. ಹೆಬಸೂರ, ಮನೋಹರ ಕೆ. ಕುಷ್ಟಗಿ, ಪ್ರಲ್ಹಾದ ಟಿ. ಹೆಬಸೂರ ಹಾಗೂ ಸಮಾಜದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin