ಆರ್‍ಎಸ್‍ಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

cm

ಮಂಗಳೂರು, ಅ.30- ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಪಿಎಫ್‍ಐ ಸಂಘಟನೆ ನಿಷೇಧ ಮಾಡುವಂತೆ ಸಂಘ ಪರಿವಾರ ಒತ್ತಾಯಿಸಿರುವ ಬಗ್ಗೆ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ ಆರ್‍ಎಸ್‍ಎಸ್ ಸಹ ಸಂಘಟನೆಗಳು ಮಾಡುತ್ತಿರುವುದೂ ಇಂತಹ ಕೃತ್ಯಗಳನ್ನೇ. ಇವುಗಳನ್ನು ಏನು ಮಾಡಬೇಕೆಂದು ತಿರುಗೇಟು ನೀಡಿದ್ದಾರೆ.  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ಸಹ ಸಂಘಟನೆಗಳು ಕೂಡ ಇಂತಹ ಕೆಲಸಗಳನ್ನೇ ಮಾಡುತ್ತಿವೆ. ಈ ಸಂಘಟನೆಗಳನ್ನು ಏನು ಮಾಡಬೇಕೆಂದು ಅವರು ಪ್ರಶ್ನಿಸಿದ್ದಾರೆ.  ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಸಂಬಂಧ ಪಿಎಫ್‍ಐ ಸಂಘಟನೆ ನಿಷೇಸಬೇಕೆಂದು ಆರ್‍ಎಸ್‍ಎಸ್ ಒತ್ತಾಯ ಮಾಡಿತ್ತು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದರು.

ಸ್ಟೀಲ್‍ಬ್ರಿಡ್ಜ್ ಪಾರದರ್ಶಕ:

ಸ್ಟೀಲ್‍ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಸರ್ಕಾರ ಪಾರದರ್ಶಕವಾಗಿದೆ. ಆದರೆ, ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಬಜೆಟ್‍ನಲ್ಲಿ ಈ ಯೋಜನೆ ಪ್ರಕಟಿಸಿದಾಗ ವಿರೋಧ ಮಾಡದ ಬಿಜೆಪಿ ಈ ಯೋಜನೆ ಪ್ರಾರಂಭ ಮಾಡುವಾಗ ವಿರೋಧ ಮಾಡಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಗ್ಲೋಬಲ್ ಟೆಂಡರ್ ಕರೆದು ಈ ಯೋಜನೆ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ. ಎಲ್ಲವೂ ಪಾರದರ್ಶಕವಾಗಿದೆ ಎಂದು ಹೇಳಿದರು. ಸ್ಟೀಲ್‍ಬ್ರಿಡ್ಜ್ ಯೋಜನೆ ಬಿಜೆಪಿ ಸರ್ಕಾರದಲ್ಲಿ ರೂಪುಗೊಂಡಿತ್ತು. ಈಗ ಹಣ ಮಾಡುವ ಯೋಜನೆ ಎಂದು ಆರೋಪಿಸುತ್ತಿದ್ದಾರೆ. ಪ್ರತಿಷ್ಠಿತ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಯೋಜನೆ ಜಾರಿಗೊಳಿಸುವಾಗ ಮಾಜಿ ಸಚಿವ ಸುರೇಶ್‍ಕುಮಾರ್ ಎಲ್ಲಿದ್ದರು ಎಂದು ಸಿಎಂ ಪ್ರಶ್ನಿಸಿದರು.  ಈ ಯೋಜನೆ ಕಾರ್ಯಗತವಾದರೆ ಕಾಂಗ್ರೆಸ್‍ಗೆ ಎಲ್ಲಿ ಲಾಭವಾಗುತ್ತದೆಯೋ ಎಂಬ ಕಾರಣಕ್ಕೆ ಬಿಜೆಪಿ ಆರೋಪ ಮಾಡುತ್ತಿದೆ.

ರಾಜಕೀಯ ಪ್ರೇರಿತ ಆರೋಪಗಳು ಆಧಾರ ರಹಿತ ಎಂದು ಹೇಳಿದರು.  ನಿಗಮಗಳಿಗೆ ಎರಡು ದಿನಗಳಲ್ಲಿ ನೇಮಕ: ನಿಗಮ-ಮಂಡಳಿಗಳಿಗೆ ಎರಡು ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.  ಈ ಸಂಬಂಧ ಹೈಕಮಾಂಡ್ ಅನುಮತಿ ನೀಡಿತು. ಎಲ್ಲ ನಿಗಮ-ಮಂಡಳಿಗಳಿಗೆ ಎರಡು ದಿನಗಳೊಳಗಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು.

ನಮಗೆ ಸಂಬಂಧವಿಲ್ಲ:

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಅವರು ಯಾವ ಪಕ್ಷ ಸೇರಿಕೊಂಡರೂ ನಮಗೆ ಸಂಬಂಧವಿಲ್ಲ. ಉಪಚುನಾವಣೆ ಎದುರಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಟಿಪ್ಪು ಜಯಂತಿ ಆಚರಣೆ: ಕಳೆದ ವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin