ಆರ್‍ಬಿಐನಿಂದ 2,420 ಕೋಟಿ ರೂ. ತುರ್ತು ಹಣ ಪಡೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ದು

ಈ ಸುದ್ದಿಯನ್ನು ಶೇರ್ ಮಾಡಿ

Chandrababu-Naidu

ಹೈದರಾಬಾದ್, ಡಿ.4-ತಮ್ಮ ರಾಜ್ಯದಲ್ಲಿ ನಗದು ಹಣವೇ ಇಲ್ಲ. ತಕ್ಷಣ ನಮ್ಮ ನೆರವಿಗೆ ಬನ್ನಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಊರ್ಜಿತ್ ಪಟೇಲ್ ಅವರಿಗೆ ತುರ್ತು ದೂರವಾಣಿ ಕರೆ ಮಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು 2,420 ಕೋಟಿ ರೂ.ಗಳ ಗರಿಗರಿ ಕರೆನ್ಸಿ ಪಡೆದಿರುವ ಸಂಗತಿ ವರದಿಯಾಗಿದೆ.  ದೇಶವನ್ನು ಭವಿಷ್ಯದಲ್ಲಿ ನಗದು-ರಹಿತ ವ್ಯವಹಾರಗಳ ಡಿಜಿಟಲ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಯತ್ನದಲ್ಲಿ ತೊಡಗಿರುವ ಉನ್ನತಾಧಿಕಾರದ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದಂತೆಯೇ ಊರ್ಜಿತ್ ಪಟೇಲ್ ಆಂಧ್ರ ಮುಖ್ಯಮಂತ್ರಿ ಅವರ ತುರ್ತು ಕರೆಗೆ ಓಗೊಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ ನಗದು ಹಣವೇ ಇಲ್ಲ. ಹೀಗಾಗಿ ರಾಜ್ಯದ ಹಲವಾರು ಜಿಲ್ಲೆಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎಂದು ನಾಯ್ಡು ವಾಸ್ತವ ಪರಿಸ್ಥಿತಿಯನ್ನು ಆರ್‍ಬಿಐಗೆ ವಿವರಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮೊತ್ತದಲ್ಲಿ ಹಲವು ಜಿಲ್ಲೆಗಳಿಗೆ ತಲಾ 240 ಕೋಟಿ ರೂ. ಹಾಗೂ ಇತರ ಜಿಲ್ಲೆಗಳಿಗೆ ತಲಾ 160 ಕೋಟಿ ರೂ.ಗಳನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರ್‍ಬಿಐ ತುರ್ತಾಗಿ ರವಾನಿಸಿದ್ದ ನಗದನ್ನು ಹೊತ್ತ ಟ್ರೂ ಜೆಟ್ ಬಾಡಿಗೆ ವಿಮಾನವು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹೈದರಾಬಾದ್‍ನಲ್ಲಿ ಭೂಸ್ಪರ್ಶ ಮಾಡಿರುವುದನ್ನು ಗನ್ನಾವರಂ ವಿಮಾನನಿಲ್ದಾಣದ ನಿರ್ದೇಶಕ ಜಿ.ಮಧುಸೂಚನ್ ರಾವ್ ಖಚಿತಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin