ಆರ್‍ಬಿಐ ಕೌಂಟರ್‍ಗಳಲ್ಲಿ ಹಳೆ ನೋಟು ವಿನಿಮಯ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

RBI-002

ನವದೆಹಲಿ, ನ.25- ನಿಷೇಧಿತ 500 ಮತ್ತು 1000 ರೂ. ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಕೌಂಟರ್‍ಗಳಲ್ಲಿ ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಳೆ ನೋಟುಗಳ ವಿನಿಮಯಕ್ಕೆ ಇಂದಿನಿಂದ ವಿದಾಯ ಹೇಳಿದ್ದರೂ ಆರ್‍ಬಿಐ ಕೌಂಟರ್‍ಗಳಲ್ಲಿ ಈ ಸೌಲಭ್ಯವನ್ನು ಮುಂದುವರೆಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ದೇಶದಲ್ಲಿರುವ ಎಲ್ಲಾ ರಿಸರ್ವ್ ಬ್ಯಾಂಕ್ ಕೌಂಟರ್‍ಗಳಲ್ಲಿ ಅಮಾನ್ಯಗೊಂಡ ಗರಿಷ್ಠ ಮೌಲ್ಯದ ನೋಟುಗಳನ್ನು ನೀಡಿ ಹೊಸ ಕರೆನ್ಸಿಯನ್ನು ಪಡೆದುಕೊಳ್ಳಲು ಮುಂದಿನ ಸೂಚನೆ ಬರುವ ತನಕ ಅವಕಾಶ ಇದೆ ಎಂದು ತಿಳಿಸಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin