ಆರ್ಬಿಐ ಬಡ್ಡಿದರ ಶೇ.0.25 ರಿಂದ ಶೇ.0.5ರಷ್ಟು ಇಳಿಕೆ ಸಾಧ್ಯತೆ
ಈ ಸುದ್ದಿಯನ್ನು ಶೇರ್ ಮಾಡಿ
ಮುಂಬೈ, ಅ.4- ರಿಸರ್ವ್ ಬ್ಯಾಂಕ್ನ ನೂತನ ಗವರ್ನರ್ ಊರ್ಜಿತ್ ಪಟೇಲ್ ಶೇ.0.25 ರಿಂದ ಶೇ.0.5ರಷ್ಟು ಬಡ್ಡಿ ದರ ಕಡಿತ ಮಾಡುವರೆಂಬ ಆಶಾಭಾವನೆ ನಡುವೆಯೇ ಇಂದು ವಾಣಿಜ್ಯ ನಗರಿಯಲ್ಲಿ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ತಮ್ಮ ಪ್ರಪ್ರಥಮ ಹಣಕಾಸು ನೀತಿ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿರುವ ಪಟೇಲ್ ಅವರು ಬಡ್ಡಿ ಕಡಿತ ಮಾಡುವ ಅನಿವಾರ್ಯ ಒತ್ತಡಕ್ಕೆ ಸಿಲುಕಿದ್ದು, ಶೇ.0.25 ರಿಂದ ಶೇ.0.5ರಷ್ಟು ಬಡ್ಡಿ ದರ ಕಡಿತವಾಗುವ ಸಾಧ್ಯತೆಯಿದೆ. ಪ್ರಸ್ತುತ ಬ್ಯಾಂಕ್ ಬಡ್ಡಿದರ ಶೇ.5ರಷ್ಟು , ರೆಪೋ ದರ ಶೇ.6.5, ರಿಸರ್ವ್ ರೆಪೋ ದರ ಶೇ.6, ಸಿಆರ್ಆರ್ ಶೇ.4 ಮತ್ತು ಎಸ್ಎಲ್ಆರ್ ಶೇ.21ರಷ್ಟು ಇದ್ದು, ಇವುಗಳನ್ನು ಅಲ್ಪ ಪ್ರಮಾಣದಲ್ಲಿ ಕಡಿತ ಮಾಡುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಿತು.
► Follow us on – Facebook / Twitter / Google+
Facebook Comments