ಆಲಿಕಲ್ಲು ಮಳೆಯಿಂದ ನೆಲಕಚ್ಚಿದ ಬೆಳೆ

ಈ ಸುದ್ದಿಯನ್ನು ಶೇರ್ ಮಾಡಿ

dabaspete

ದಾಬಸ್‍ಪೇಟೆ, ಮೇ 2- ಬಿಸಿಲ ತಾಪದಿಂದಕಂಗೆಟ್ಟಿದ್ದ ಸೋಂಪುರ ಹೋಬಳಿಯ ಜನರಿಗೆ  ಭರಣಿ ಮಳೆಯಿಂದ ಶಿವಗಂಗೆಯ ಭಾಗದಗೆದ್ದಲಹಳ್ಳಿ, ಕೆಂಗಲ್ ಕೆಂಫೋಹಳ್ಳಿ ಗ್ರಾಮಗಳಲ್ಲಿ ಸುರಿದಆಲಿಕಲ್ಲಿನಿಂದ ಬೆಳೆಗಳಿಗೆ ಭಾರಿಅನಾಹುತವಾಗಿದ್ದು ಮೂರು ಲಕ್ಷಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆಭಾನುವಾರರಾತ್ರಿ 3 ಗಂಟೆಯ ಸುಮಾರಿನಲ್ಲಿಗುಡುಗು,ಸಿಡಿಲು, ಆಲಿಕಲ್ಲು ಮತ್ತು ಭಾರಿ ಗಾಳಿಯಿಂದ ಕೂಡಿದ ಮಳೆ ಸುರಿದ ಪರಿಣಾಮ ಸಣ್ಣಪುಟ್ಟ ಗುಂಡಿಗಳಲ್ಲಿ ನೀರು ಕಾಣಿಸಿಕೊಂಡಿದೆ, ಆದರೆ ಆಲಿಕಲ್ಲಿನ ಮಳೆಯಿಂದ ಗ್ರಾಮದರೈತರಾಜಣ್ಣಇವರಿಗೆ ಸೇರಿದತೋಟದ ಬೆಳೆಗಳಾದ ಹಾಗಲಕಾಯಿ, ಹುರುಳಿಕಾಯಿ, ಗುಲಾಬಿ ಹೂವಿನ ತೋಟ, ಮತ್ತು ಬೆಳೆಗಳ ಎಲೆಗಳು ಸಂಪೂರ್ಣ ನೆಲಕಚ್ಚಿವೆಇದರಿಂದ ಬೆಳೆ ನಷ್ಟವಾಗಿದೆಎನ್ನುತ್ತಾರೆರೈತರಾಜು,ಕಳೆದ ವರ್ಷಉತ್ತಮ ಮಳೆ ಬಾರದೆ ನೀರಿನ ಹಾಹಾಕಾರತಲೆದೊರಿದ್ದುಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಹೊಂದಿಸಿಕೊಳ್ಳ ಲಾಗದೇರೈತರು ಪರಿತಪಿಸುತ್ತಿದ್ದುತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ದುಭಾರಿ ಹಣತೆತ್ತಾದರೂ ಮೇವು

ಹೊಂದಿಸಿಕೊಳ್ಳುತ್ತಿದ್ದಾರೆ ನಾನು ಇಂಥಹ ಸಂದರ್ಭದಲ್ಲಿಯೂ ಕೊಳವೆ ಬಾವಿಯಲ್ಲಿದೊರೆಯುವಅಲ್ಪ ಪ್ರಮಾಣದ ನೀರಿನಿಂದ ದನಗಳಿಗೆ ಮೇವು ಮತ್ತು ಕೆಲವು ತರಕಾರಿಗಳನ್ನು ಬೆಳೆದಿದೆ ಆದರೆ, ಭಾನುವಾರ ರಾತ್ರಿ ಬೆಳೆಯ ಮೇಲೆ ಬಿದ್ದಆಲಿಕಲ್ಲಿನಿಂದಚೂರುಚೂರಾಗಿದೆಒಂದೆಡೆ ನಮ್ಮಭಾಗದಲ್ಲಿಕಾಡಾನೆಗಳ ಕಾಟಇದೆ ಈಗ ವರುಣನಅವಕೃಪೆಯಿಂದ ನನಗೆ ಕಷ್ಟ ಎದುರಾಗಿದೆಎನ್ನುತ್ತಾರೆರೈತರಾಜು ಕಳೆದ ಒಂದು ವಾರದಿಂದ ಸೋಂಪುರ ಭಾಗದಅಲ್ಲಲ್ಲಿ ಮಳೆ ಬರುತ್ತಿದ್ದು ಸ್ವಲ್ಪ ಮಟ್ಟಿನತಾಪಮಾನದಲ್ಲಿ ಇಳಿಕೆಯಾಗಿದೆ ಜೊತೆಗೆ ಗುಂಡಿಗಳಲ್ಲಿ ನೀರು ನಿಂತಿದೆಅಲ್ಲದೆ ಹಸಿರು ಹುಲ್ಲಿನ ಮೊಳಕೆ

ಕಾಣುತ್ತಿದೆಇದೇರೀತಿಇನ್ನು ಮೂರ್ನಾಲ್ಕು ಭಾರಿ ಮಳೆ ಸುರಿದರೆರೈತರು ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳುತ್ತಾರೆ ಅಲ್ಲದೆ ಬಯಲಿನಲ್ಲಿ ಹುಲ್ಲುಚಿಗುರೊಡೆದು ಜಾನುವಾರುಗಳಿಗೆ ಮೇವು ದೊರೆಯುತ್ತದೆಇದರಿಂದತಾಲೂಕು ಆಡಳಿತಕ್ಕೆ ಸ್ವಲ್ಪ ಮಟ್ಟಿನಒತ್ತಡಕಡಿಮೆಯಾಗುತ್ತದೆ
ತಾಲೂಕು ಆಡಳಿತ ಪ್ರತಿ ಪಂಚಾಯಿತಿಯಲ್ಲಿಯೂಕುಡಿಯುವ ನೀರಿನ ವ್ಯವಸ್ಥೆಗಾಗಿಕ್ರಮತೆಗೆದುಕೊಂಡಿದ್ದು ನೀರಿನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಮಳೆರಾಯ ಕೃಪೆ ತೊರಿದರೆ ನಮ್ಮಜನರ ಮತ್ತು ಜಾನುವಾರುಗಳ ಸಮಸ್ಯೆದೂರಾಗುತ್ತದೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin