ಆಶುರಾ ಆಚರಣೆ ವೇಳೆ ಶಿಯಾ ಮುಸ್ಲಿಮರ ಮೇಲೆ ಬಂದೂಕುದಾರಿಗಳ ದಾಳಿ : 15 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

15-Killed

ಕಾಬೂಲ್, ಅ.12-ಶಿಯಾ ಮುಸ್ಲಿಮರ ಬಹು ಮುಖ್ಯ ಹಬ್ಬಗಳಲ್ಲಿ ಒಂದಾದ ಆಶುರಾ ಆಚರಣೆ ವೇಳೆ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಹತರಾಗಿ, 40 ಜನರು ಗಾಯಗೊಂಡ ಘಟನೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ನಡೆದಿದೆ. ಈ ದುರಂತ ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ, 13 ಶಿಯಾ ಯಾತ್ರಿಗಳು ಸಾವಿಗೀಡಾಗಿದ್ದಾರೆ. ಇದೇ ವೇಳೆ ಭದ್ರತಾ ಪಡೆಗೆ ಒಬ್ಬ ಲಷ್ಕರ್ ಉಗ್ರ ಕೂಡ ಬಲಿಯಾಗಿದ್ದಾನೆ.  ದಕ್ಷಿಣ ಕಾಬೂಲ್‍ನ ಲಷ್ಕರ್ ಗಾಹ್‍ನಲ್ಲಿ ಈ ಘಟನೆ ನಡೆದಿದ್ದು, ತಾಲಿಬಾಲ್ ಬಂಡುಕೋರರು ಮತ್ತೆ ಹಿಂಸಾಚಾರ ಮುಂದುವರಿಸಿರುವುದರಿಂದ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ಉಗ್ರರನ್ನು ಹತ್ತಿಕ್ಕಲು ಆಫ್ಘನ್ ಪಡೆ ನೂರಾರು ಕಮ್ಯಾಂಡೋಗಳನ್ನು ನಿಯೋಜಿಸಿದೆ.

Ashura

ಈ ದಾಳಿಯಲ್ಲಿ 13 ಶಿಯಾ ಮುಸ್ಲಿಮರು ಹಾಗೂ ಒಬ್ಬ ಪೊಲೀಸ್ ಅಧಿಕಾರಿ, ಮತ್ತು ಓರ್ವ ತಾಲಿಬಾನ್ ಉಗ್ರ ಹತನಾಗಿ, ಮೂವರು ಪೊಲೀಸರೂ ಒಳಗೊಂಡಂತೆ 36 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ಸಿದಿಖ್ ಸಿದ್ಧಿಖಿ ಹೇಳಿದ್ದಾರೆ.  ಕಾಬೂಲ್‍ನಲ್ಲಿ ಮತ್ತಷ್ಟು ತಾಲಿಬಾನ್ ಉಗ್ರರು ಅಡಗಿರುವ ಸಾಧ್ಯತೆ ಇದ್ದು, ಶೋಧ ಕಾರ್ಯ ಮುಂದುವರಿದಿದೆ.

► Follow us on –  Facebook / Twitter  / Google+

Facebook Comments

Sri Raghav

Admin