ಆಶ್ರಯ ಕಾಲನಿ ಮನೆಗಳಿಂದ ಒಕ್ಕಲೆಬ್ಬಿಸದಿರಲು ಒತ್ತಾಯಿಸಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

10

ಮುದ್ದೇಬಿಹಾಳ,ಫೆ.5- ಮನೆಗಳಿಂದ ತಮ್ಮನ್ನು ಒಕ್ಕಲೆಬ್ಬಿಸಬಾರದು ಎಂದು ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಆಶ್ರಯ ಕಾಲನಿಯ ನಿವಾಸಿಗಳು ನಿನ್ನೆ ಪುರಸಭೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.ಸಾಮಾನ್ಯ ಸಭೈ ನಡೆಯುತ್ತಿದ್ದ ವೇಳೆ ಪತ್ರ ಸಲ್ಲಿಸಿದ ನಿವಾಸಿಗಳು, ಈಗ ಇರುವ ಸ್ಥಿತಿಯಲ್ಲಿಯೇ ನಾವು ವಾಸಿಸುತ್ತಿದ್ದೇವೆ. ನಮಗೆ ಮೂಲಸೌಕರ್ಯಗಳೇನು ಬೇಡ. ಮನೆಗಳಿಂದ ನಮ್ಮನ್ನು ಖಾಲಿ ಮಾಡಿಸಬೇಡಿ ಎಂದು ಕಣ್ಣೀರು ಸುರಿಸುತ್ತಾ ಅಲವತ್ತುಕೊಂಡರು. ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಬೂದಿಹಾಳಮಠ, ಸರ್ಕಾರದಿಂದ ಆ ಜಾಗದಲ್ಲಿ ಗುಂಪು ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕು ಹೆಚ್ಚಿನ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿದ್ದು ಸದ್ಯಕ್ಕೆ ಅಲ್ಲಿ ವಾಸಿಸುತ್ತಿರುವ 115 ಜನರಿಗೆ ಮನೆ ಹಕ್ಕನ್ನು ನಿರಾಕರಿಸುತ್ತಿಲ್ಲ.

ವಾಸ್ತವವಾಗಿ ಶಾಸಕರೇ ಮುಂದೆ ನಿಂತು ಮನೆ ವಿತರಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲಿ ಶಿಥಿಲಗೊಂಡಿರುವ ಮನೆಗಳನ್ನು ತೆರವುಗೊಳಿಸಿ ಪುನರ್ ವಸತಿ ಸಮುಚ್ಛಯ ನಿರ್ಮಿಸಲಾಗುತ್ತದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ ಬಳಿಕ ನಿವಾಸಿಗಳು ಅಲ್ಲಿಂದ ಮರಳಿದರು.ಶಿವಶರಣ ಸಮಗಾರ ಹರಳಯ್ಯನವರ ಸಮಾಜದ ಬಾಂಧವರು ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಡಾ. ಬಾಬು ಜಗಜೀವನರಾಮ ಭವನವನ್ನು ಪೂರ್ಣಗೊಳಿಸಲು ಅನುದಾನ ಒದಗಿಸುವಂತೆ ಕೋರಿ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟೆ ಹಾಗೂ ಅಧ್ಯಕ್ಷ ಬಸನಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಮುದಾಯ ಭವನ ಅರ್ಧಕ್ಕೆ ನಿಂತಿದ್ದು ಅಲ್ಲಿ ಹಂದಿ, ನಾಯಿಗಳು ವಾಸಿಸುತ್ತಿವೆ. ಕೂಡಲೇ ಈ ಭವನ ಪೂರ್ಣಗಳಿಸಲು 20 ಲಕ್ಷ ರೂ. ಅನುದಾನ ಒದಗಿಸಬೇಕು ಎಂದು ಕೋರಿದರು. ಸಮಾಜದ ಮುಖಂಡರಾದ ಭಗವಂತ ಕಬಾಡೆ, ಅಂಬಾಜಿ ಕಬಾಡೆ, ಪರಶುರಾಮ ಸಿಂಧೆ, ಹಣಮಂತ ಕುಂದ ರಗಿ, ಅಶೋಕ ದೇವಮಾನೆ, ಮೌನೇಶ ಇಲಕಲ್, ಪ್ರಭು ರಾಜಾಪುರ, ಯಲ್ಲಪ್ಪ ಪಾಟೀಲ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin