ಆಷಾಢಕ್ಕೆ ಹೆಂಡತಿಯನ್ನು ತವರಿಗೆ ಕಳಿಸಿ, ಆಕೆಯ ಸ್ನೇಹಿತೆಗೆ ತಾಳಿ ಕಟ್ಟಿದ ಭೂಪ

ಈ ಸುದ್ದಿಯನ್ನು ಶೇರ್ ಮಾಡಿ

agSDGSG

ಮೈಸೂರು, ಆ.7-ಇತ್ತೀಚೆಗಷ್ಟೆ ಮದುವೆಯಾಗಿದ್ದ  ಮಹಾಶಯನೊಬ್ಬ ಆಷಾಢಕ್ಕೆ ಪತ್ನಿಯನ್ನು ತವರಿಗೆ ಕಳುಹಿಸಿ, ಆಕೆಯ ಸ್ನೇಹಿತೆಯನ್ನು ಕರೆದೊಯ್ದು  ತಾಳಿ ಕಟ್ಟಿರುವ ಘಟನೆ ಕೆ.ಆರ್. ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಇಂತಹ ಮಹತ್ಕಾರ್ಯ ಮಾಡಿರುವ  ಚಪಲಚನ್ನಿಗರಾಯ ಕೆಆರ್‍ನಗರ ಅಗ್ರಹಾರದ ವಾಸಿ ಅನಿಲ್ (27).  ಕಳೆದ ಜೂನ್‍ನಲ್ಲಿ  ಕಾವ್ಯ ಎಂಬುವರೊಂದಿಗೆ ಮದುವೆಯಾಗಿದ್ದ  ಅನಿಲ್, ಆರಂಭದಲ್ಲಿ ಚೆನ್ನಾಗಿದ್ದ. ಆದರೆ ಮದುವೆ ನಂತರ (ಬಡ್ದುಳಿ)ಶಾಸ್ತ್ರಕ್ಕಾಗಿ ಕಾವ್ಯಳ ಜೊತೆ ಬಂದಿದ್ದ  ಬಾಲಕಿ ಮೇಲೆ ಕಣ್ಣು ಹಾಕಿದ್ದ.  ಆದರೆ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಆಷಾಢ ಬಂದ ಹಿನ್ನೆಲೆಯಲ್ಲಿ ಕಾವ್ಯ ತವರಿಗೆ ಬಂದಿದ್ದಳು. ಈ ವೇಳೆ ಸಮಯ ಸಾಧಿಸಿ ಅನಿಲ್ ಐನಾತಿ ಐಡಿಯಾ ಮಾಡಿದ್ದ. ಭೀಮನ ಅಮಾವಾಸ್ಯೆ ನಂತರ ಪತ್ನಿಯನ್ನು ನೋಡುವ ನೆಪವೊಡ್ಡಿ ಗ್ರಾಮಕ್ಕೆ ಬಂದ ಈತ ಗ್ರಾಮದ ಹೊರಭಾಗಕ್ಕೆ  ಬಾಲಕಿಯನ್ನು ಕರೆಸಿಕೊಂಡು ನೇರವಾಗಿ ಆಕೆಯನ್ನು ಶಿವಮೊಗ್ಗ ಕರೆದೊಯ್ದಿದ್ದಾನೆ. ಇತ್ತ ಕಾವ್ಯ ಮನೆಯವರು ಅಳಿಯ ಬರುತ್ತಾನೆಂದು ಕಾದು, ನಂತರ   ಎಲ್ಲೋ ಹೋಗಿರಬಹುದೆಂದು ಸುಮ್ಮನಾಗಿದ್ದರು. ಆದರೆ ಬಾಲಕಿ ಕಾಣದಿದ್ದಾಗ ಆತಂಕಗೊಂಡ ಆಕೆ ಮನೆಯವರು ಕಾವ್ಯ ಮನೆಗೆ ಬಂದು ವಿಷಯ ತಿಳಿಸಿದ್ದಾರೆ.
ಎಲ್ಲಾ ಹುಡುಕಾಟ ನಡೆಸಿ ಕೊನೆಗೆ ಆಕೆ ಅನಿಲ್ ಜೊತೆ ಹೋಗಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಎಲ್ಲರೂ ಶಿವಮೊಗ್ಗದತ್ತ ಹೋಗಿದ್ದಾರೆ.  ಅಲ್ಲಿ ಹೋಗಿ ನೋಡಿದಾಗ ಬಾಲಕಿ ಕೊರಳಲ್ಲಿ ತಾಳಿ ಇರುವುದು ನೋಡಿ ಶಾಕ್ ಆಗಿದ್ದಾರೆ. ನಂತರ ವಿಚಾರಿಸಿದಾಗ ಅನಿಲ್‍ನೇ ಈಕೆಯನ್ನು ಮದುವೆಯಾಗಿದ್ದಾನೆ ಎಂಬುದು ತಿಳಿಯುತ್ತಿದ್ದಂತೆ ಕಾವ್ಯಳ ಪೆÇೀಷಕರು ಆಕ್ರೋಶಗೊಂಡು ಅನಿಲ್‍ನನ್ನು ಜೊತೆಯಲ್ಲಿ ಕರೆತಂದು ಕೆ.ಆರ್.ಠಾಣೆÀ  ಪೆÇಲೀಸರಿಗೆ ಒಪ್ಪಿಸಿದ್ದಾರೆ.  ಪ್ರಸ್ತುತ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಇಂತಹ ವಿಚಿತ್ರ ಪ್ರಕರಣ ಅರಿತು ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ.

Facebook Comments

Sri Raghav

Admin