ಆಷಾಢದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಹುಂಡಿಗೆ ಹರಿದು ಬಂತು ಕಾಣಿಕೆ
ಮೈಸೂರು, ಜು.9-ವಿಶ್ವವಿಖ್ಯಾತ ಚಾಮುಂಡೇಶ್ವರಿ ದೇವಿಯ ಹುಂಡಿಗೆ ಲಕ್ಷ್ಮೀಯ ಕಟಾಕ್ಷ ಒಲಿದು ಬರುತ್ತಿದೆ. ಆಷಾಢಮಾಸದಲ್ಲಿ ಶುಕ್ರವಾರದಂದು ನಡೆಯುವ ವಿಶೇಷ ಪೂಜೆ ಸಂದರ್ಭದಲ್ಲಿ ಎರಡು ಶುಕ್ರವಾರಗಳಂದು ದೇವಿಯ ಸನ್ನಿಧಾನಕ್ಕೆ ಹರಿದು ಬಂದಿರುವ ಬರೋಬ್ಬರಿ ಮೊತ್ತ 40 ಲಕ್ಷ ರೂಪಾಯಿ. ಆಷಾಢ ಮಾಸದಲ್ಲಿ ಭಕ್ತಸಾಗರವೇ ಚಾಮುಂಡೇಶ್ವರಿ ಬೆಟ್ಟಕ್ಕೆ ಹರಿದು ಬರುತ್ತದೆ. ಈ ಮಾಸದ ನಾಲ್ಕು ಶುಕ್ರವಾರಗಳಂದು ವಿಶೇಷ ಪೂಜೆ, ಹೋಮ ಹವನಗಳು ಜರುಗುತ್ತವೆ. ಪ್ರಥಮ ಶುಕ್ರವಾರ 19 ಲಕ್ಷ ರೂ. ಕಾಣಿಕೆಯಲ್ಲಿ ಬಂದಿದ್ದರೆ, 2ನೆ ಶುಕ್ರವಾರ 21 ಲಕ್ಷ ರೂ.ಗಳು ಸಂಗ್ರಹವಾಗಿತ್ತು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಕಾಣಿಕೆಯ ಮೊತ್ತ ಹೆಚ್ಚು ಸಂಗ್ರಹವಾಗಿದೆ. 2015ರಲ್ಲಿ 29,67,000ರೂ. ಸಂಗ್ರಹವಾಗಿದ್ದರೆ, 2016ರಲ್ಲಿ 38ಲಕ್ಷ ರೂ. ಹುಂಡಿ ಹಣ ಬಂದಿತ್ತು. ಈ ಬಾರಿ 40,0091 ಸಾವಿರ ರೂ. ಹಣ ಸಂಗ್ರಹವಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS