ಆಷಾಢ ಶುಕ್ರವಾರದ ಎಫೆಕ್ಟ್, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭರ್ಜರಿ ಕಲೆಕ್ಷನ್

ಈ ಸುದ್ದಿಯನ್ನು ಶೇರ್ ಮಾಡಿ

Chamundeshwari

ಮೈಸೂರು, ಆ.13-ಈ ಬಾರಿಯ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, 97.37 ಲಕ್ಷ ರೂ. ಹಣ ಸಂಗ್ರಹವಾಗಿದೆ. ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ ಈ ಬಾರಿ ಆದಾಯದಲ್ಲಿ ಕುಸಿತ ಕಂಡು ಬಂದಿದೆ. ಈ ಬಾರಿ ನಾಲ್ಕು ಆಷಾಢ ಶುಕ್ರವಾರಗಳು ಬಂದಿದ್ದು, ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಭಕ್ತರಿಗೆ 50ರೂ. ಪ್ರವೇಶ ಚೀಟಿ ವಿತರಣೆಯಿಂದ ಆದಾಯ 14,52,270ರೂ. ಸಂಗ್ರಹವಾದರೆ, 300ರೂ.ನ ದೇವರ ದರ್ಶನದ ಚೀಟಿ ವಿತರಣೆಯಿಂದ 82,85,450 ರೂ. ಸೇರಿ ಒಟ್ಟು 97,37,720ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷವೂ 4 ಆಷಾಢ ಶುಕ್ರವಾರ ಬಂದಿದ್ದು, ದೇವಿಯ ವರ್ಧಂತ್ಯೋತ್ಸವದಿಂದ 1.03 ಕೋಟಿ ಹಣ ಸಂಗ್ರಹವಾಗಿತ್ತು ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

Facebook Comments

Sri Raghav

Admin