ಆಸೆಗೆ ಬಲಿಯಾಗದಿರಿ ..ಬಿಪಿಎಲ್ ಕಾರ್ಡುದಾರರಿಗೆ ಸಚಿವ ಯು.ಟಿ ಖಾದರ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

UT-Khadara

ಬೆಂಗಳೂರು, ನ.15- ಐನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಬೇರೆಯವರ ಹಣವನ್ನೇನಾದರೂ ತಮ್ಮ ಖಾತೆಗೆ ಹಾಕಿಸಿಕೊಳ್ಳುವ ಬಿಪಿಎಲ್ ಕಾರ್ಡುದಾರರು ತೀವ್ರ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಬಿಪಿಎಲ್ ಕಾರ್ಡುದಾರರು ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಒಂದು ವೇಳೆ ಆಸೆಗೆ ಒಳಗಾಗಿ ತಮ್ಮ ಖಾತೆಗೆ ಬೇರೆಯವರ ಹಣವನ್ನು ಹಾಕಿಸಿಕೊಂಡರೆ ತಾವು ಪಡೆಯುವ ವಿವಿಧ ಸೌಲಭ್ಯಗಳಿಗೆ ಕುತ್ತುಬರುವ ಸಾಧ್ಯತೆ ಇರುತ್ತದೆ ಎಚ್ಚರವಿರಲಿ. ಯಾರೂ ಹಣ ಹಾಕಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಪಡಿತರ ಸಾಗಾಣೆದಾರರ ವಿವಿಧ ಬೇಡಿಕೆ ಈಡೇರಿಸುವಂತೆ ಲಾರಿ ಮಾಲೀಕರು ಹಾಗೂ ಚಾಲಕರು ಮುಷ್ಕರ ಹೂಡಿರುವುದರಿಂದ ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು.ದಾಸ್ತಾನು ಮಳಿಗೆಯಿಂದಲೇ ಪಡಿತರ ಪಡೆಯಬಹುದು. ಹಾಗೆ ಪಡೆದುಕೊಂಡರೆ ಅದರ ಸಾಗಣೆಗೆ ತಗಲುವ ವೆಚ್ಚವನ್ನು ನ್ಯಾಯಬೆಲೆ ಅಂಗಡಿಗಳಿಗೆ ಕೊಡಿಸಲಾಗುವುದು ಎಂದರು.ಮುಷ್ಕರದಿಂದ ನಗರದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿದೆ. ಆದರೆ, ಬೇರೆ ಕಡೆ ಅಷ್ಟೇನು ಸಮಸ್ಯೆ ಆಗಿಲ್ಲ ಎಂದು ಸಚಿವ ಖಾದರ್ ತಿಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin