ಆಸ್ಟ್ರಿಯಾದದಲ್ಲಿ ರಬ್ಬರ್ ಡ್ಯಾಂ ವಿದ್ಯುತ್ ಉತ್ಪಾದನಾಗಾರಗಳ ಮಾಹಿತಿ ಪಡೆದುಕೊಂಡ ಸಚಿವ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar----02

ಬೆಂಗಳೂರು, ನ.6-ಜರ್ಮನ್ ಪ್ರವಾಸದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಎಲ್ ಅಧಿಕಾರಿಗಳ ತಂಡ ಆಸ್ಟ್ರಿಯಾದ ಸ್ಟೇರ್‍ನಲ್ಲಿರುವ ರಬ್ಬರ್ ಡ್ಯಾಂ ಪರಿಣಿತರಾದ ಹೈಡ್ರೋ ಕನ್ಸ್‍ಸ್ಟ್ರಕ್ಷನ್ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಸೆಟ್ರರ್ ಹಾಗೂ ಸ್ಟಾಲಾವ್‍ನಲ್ಲಿ ಸಂಸ್ಥೆ ನಿರ್ಮಿಸಿರುವ ರಬ್ಬರ್ ಡ್ಯಾಂ ಆಧಾರಿತ 300 ಹಾಗೂ 1200 ಕೆ.ವಿ. ಸಾಮಥ್ರ್ಯದ ಎರಡು ರಬ್ಬರ್ ಡ್ಯಾಂ ಆಧಾರಿತ ವಿದ್ಯುತ್ ಉತ್ಪಾದನಾಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಕರ್ನಾಟಕದಲ್ಲಿ ರಬ್ಬರ್ ಡ್ಯಾಂ ಆಧಾರಿತ ವಿದ್ಯುತ್ ಉತ್ಪಾದನೆ ಸಾಧ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಎಂಯುಜಿ ಕಂಪೆನಿ ನಿರ್ವಹಿಸುತ್ತಿರುವ ಲೊಕಾವೋ ಮತ್ತು ಪೆರಿಸ್‍ಗಳಲ್ಲಿನ ಹಾರು ಬೂದಿ ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಿ ಹಾರು ಬೂದಿ ನಿರ್ವಹಣೆ ಕುರಿತು ಮಾಹಿತಿ ಪಡೆದರು.

ನಮ್ಮ ರಾಜ್ಯದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಶೇಖರಣೆಯಾಗುತ್ತಿರುವ ಹಾರು ಬೂದಿ ನಿರ್ವಹಣೆಗೆ ಈ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಂಪೆನಿ ಸಿಇಒ ಡಾ.ಅಲ್ಫೇರೆಕ್ಟ್ ಲವ್ ಫೇರ್ ಮತ್ತು ಅಧಿಕಾರಿಗಳಿಗೆ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin