ಆಸ್ಟ್ರೇಲಿಯಾಕ್ಕೆ 2 ರನ್‍ಗಳ ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Aus
ಪರ್ತ್,ನ.4- ದಕ್ಷಿಣಆಫ್ರಿಕಾದ ಸಂಘಟಿತ ಹೋರಾಟದಿಂದಾಗಿ ಆಸ್ಟ್ರೇಲಿಯಾ ತಂಡವು ಕೇವಲ 2 ರನ್‍ಗಳ ಮುನ್ನಡೆ ಪಡೆಯಲು ಶಕ್ತವಾಗಿದೆ. ಮೊದಲ ದಿನದ ಅಂತ್ಯಕ್ಕೆ 105 ರನ್‍ಗಳಿಗೆ ವಿಕೆಟ್ ನಷ್ಟವಿಲ್ಲದೆ ಆಟ ಮುಂದುವರಿಸಿದ ಆಸ್ಟ್ರೇಲಿಯಾ 244 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ಕೇವಲ 2 ರನ್‍ಗಳ ಮುನ್ನಡೆ ಸಾಧಿಸಿದೆ.

ಶತಕ ವಂಚಿತ ವಾರ್ನರ್:

ನಿನ್ನೆ ಅಜೇಯ ಅರ್ಧಶತಕ ಗಳಿಸಿದ್ದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇಂದು ಕೂಡ ಸ್ಫೋಟಕ ಆಟವನ್ನು ಪ್ರದರ್ಶಿಸಿದರೂ ಶತಕ (97 ರನ್, 16 ಬೌಂಡರಿ, 1 ಸಿಕ್ಸರ್) ಹೊಸ್ತಿನಲ್ಲಿದ್ದಾಗ ಡೇನ್ ಸ್ಟೇನ್ ಬೌಲಿಂಗ್‍ನಲ್ಲಿ ಔಟಾದರು.ಡೇವಿಡ್ ವಾರ್ನರ್ ಔಟಾದ ನಂತರ ಸ್ಟೇನ್ ಗಾಯಗೊಂಡು ಹೊರ ನಡೆದರೂ ಕೂಡ ಫಿಲಿಂಡರ್ ಹಾಗೂ ಮಹಾರಾಜ್ ಆಸ್ಟ್ರೇಲಿಯಾದ ರನ್ ದಾಹಕ್ಕೆ ಬ್ರೇಕ್ ಹಾಕುವ ಮೂಲಕ 244 ರನ್‍ಗಳಿಗೆ ಅಲೌಟ್ ಮಾಡಿತು.ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (97 ರನ್), ಶಾನ್ ಮಾರ್ಶ್ (63 ರನ್, 7 ಬೌಂಡರಿ) ಯಾವ ಬ್ಯಾಟ್ಸ್‍ಮನ್‍ಗಳಿಂದಲೂ ಉತ್ತಮ ಹೋರಾಟ ಕಾಣಲಿಲ್ಲ.

ದಕ್ಷಿಣಆಫ್ರಿಕಾ ಉತ್ತಮ ಹೋರಾಟ:

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ಕುಕ್ ಹಾಗೂ ಎಲ್ಗರ್ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 20 ರನ್‍ಗಳನ್ನು ಗಳಿಸಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin