ಆಸ್ಟ್ರೇಲಿಯಾದಲ್ಲಿ 8 ಭಾರತೀಯ ನಕಲಿ ಪತ್ರಕರ್ತರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Fake-India-01

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು ಜನರನ್ನು ಬಿಸ್ಬೇನ್ ಏರ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ. ಬ್ರಿಸ್ಟೆನ್ ವಿಮಾನನಿಲ್ದಾಣದಲ್ಲಿ ನಿನ್ನೆ ಪತ್ರಕರ್ತ ರಾಜೇಶ್ ಕುಮಾರ್ ಶರ್ಮ(46) ಹಾಗೂ ಎಂಟು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆ.  ಖಚಿತ ಸುಳಿವಿನ ಮೇಲೆ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಎಂಟು ಜನರ ಬಳಿ ಇರುವ ಮಾದ್ಯಮ ಪ್ರತಿನಿಧಿ ಮಾನ್ಯತೆ ನಕಲಿ ಎಂಬುದು ಪತ್ತೆಯಾಯಿತು. ಇವರನ್ನು ಕ್ರೀಡಾ ಪತ್ರಕರ್ತರ ಸೋಗಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಜೇಶ್ ಆಸ್ಟ್ರೇಲಿಯಾಗೆ ಕರೆಸಿಕೊಂಡಿದ್ದ ಎಂದು ಆಸ್ಟ್ರೇಲಿಯಾ ಗಡಿ ಪಡೆ(ಎಬಿಎಫ್) ಆರೋಪಿಸಿದೆ. ಈ ಒಂಭತ್ತು ಜನರನ್ನು ಬಂಧಿಸಿ ಕೂಲಂಕಷ ವಿಚಾರಣೆಗ ಒಳಪಡಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin