ಆಸ್ಟ್ರೇಲಿಯಾ ಟ್ವೆಂಟಿ-20ಗೆ ಜಸ್ಟಿನ್ ಲ್ಯಾಂಗರ್ ಮುಖ್ಯ ಕೋಚ್

ಈ ಸುದ್ದಿಯನ್ನು ಶೇರ್ ಮಾಡಿ

Justin-Langer
ಸಿಡ್ನಿ , ಜ.1- ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರನ್ನು ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಗೆ ಜಸ್ಟಿನ್ ಲ್ಯಾಂಗರ್ ಮುಖ್ಯ ಕೋಚ್ ಹಾಗೂ ಜಿಸೆನ್ ಗಿಲೆಸ್ಪಿ ಸಹಾಯಕ ಕೋಚ್ ಆಗಿ ಆಯ್ಕೆಗೊಂಡಿದ್ದಾರೆ. ಸುದ್ದಿಗಾರರೊಂದಿಗೆ ಈ ಸುದ್ದಿಯನ್ನು ತಿಳಿಸಿದ ಆಸ್ಟ್ರೇಲಿಯಾದ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‍ನ ತರಬೇತುದಾರ ರಿಕ್ಕಿ ಪಾಂಟಿಂಗ್ ಮುಂಬರುವ ಶ್ರೀಲಂಕಾದ ವಿರುದ್ಧ ನಡೆಯುವ 3ಟ್ವೆಂಟಿ-20 ಪಂದ್ಯಗಳು ಮೆಲ್ಬೋರ್ನ್ ( ಫೆ.17), ಜಿಲ್ಯಾಂಗ್ (ಫೆ. 20), ಅಡಿಲೇಡ್ (ಫೆ. 22) ರಂದು ನಡೆಯುವ ಪಂದ್ಯಗಳಿಗೆ ಲ್ಯಾಂಗರ್ ಅನ್ನು ಮುಖ್ಯ ಕೋಚ್ ಹಾಗೂ ಜೆಸನ್ ಗಿಲ್ಪೆಸ್ಸಿಯವರನ್ನು ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.  ಅಲ್ಲದೆ ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಲ್ಯಾಂಗರ್ ಹಾಗೂ ಗಿಲ್ಪೆಸಿ ಅವರೇ ತರಬೇತುದಾರರಾಗಿ ಮುಂದುವರೆಯಲಿದ್ದಾರೆ ಎಂದು ಸುದ್ದಿಗಾರರಿಗೆ ರಿಕ್ಕಿ ಪಾಂಟಿಂಗ್ ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin