ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನೇ ತಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ

ಈ ಸುದ್ದಿಯನ್ನು ಶೇರ್ ಮಾಡಿ

car

ಮೈಸೂರು, ಸೆ.7- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನೇ ತಮ್ಮನ ಮೇಲೆ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಮ್ಮ ಪಾರಾಗಿರುವ ಘಟನೆ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಬಿಗ್ ಬಾಸ್ ಎಂಬ ಬಟ್ಟೆ ಶೋರೂಂ ಮಾಲೀಕರಾದ ವಿಕಾಸ್ (26) ಹಾಗೂ ಈತನ ಅಣ್ಣ ವೈಭವ್ (28) ನಡುವೆ ಹಲವಾರು ಬಾರಿ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು.  ಇವರ ತಂದೆ ಗುಪ್ತ ಎಂಬುವರು ಕೋಟ್ಯಂತರ ರೂ. ಆಸ್ತಿ ಒಡೆಯರಾಗಿದ್ದು, ಆಸ್ತಿ ವಿವಾದವಾಗಿ ಇವರ ಮಕ್ಕಳಾದ ವಿಕಾಸ್ ಹಾಗೂ ವೈಭವ್ ನಡುವೆ ಜಗಳ ನಡೆದು ನ್ಯಾಯಾಲಯದ ಮೆಟ್ಟಿಲು ಸಹ ಏರಿತ್ತು.

ಗೀತಾ ರಸ್ತೆಯಲ್ಲಿ ವಿಕಾಸ್ ವಾಸವಾಗಿದ್ದರೆ, ವಿಜಯನಗರದಲ್ಲಿ ವೈಭವ್ ವಾಸವಾಗಿದ್ದಾರೆ. ಅಣ್ಣ-ತಮ್ಮಂದಿರು ಬೇರೆ ಬೇರೆ ವಾಸವಾಗಿದ್ದರೂ ಇವರಿಬ್ಬರ ನಡುವೆ ಆಸ್ತಿ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.ಈ ಮಧ್ಯೆ ನಿನ್ನೆ ಮಧ್ಯರಾತ್ರಿ 12.30ರಲ್ಲಿ ವಿಕಾಸ್ ತಮ್ಮ ಅಂಗಡಿಯಿಂದ ನ್ಯಾನೊ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಲಕ್ಷ್ಮೀಪುರಂ ಬಳಿಯ ಬುದ್ಧಮಂದಿರ ಸಮೀಪದ ಜೆಎಲ್‍ಬಿ ರಸ್ತೆಯಲ್ಲಿ ಅಣ್ಣ ವೈಭವ್ ಈತನಿಗೆ ಗುಂಡು ಹಾರಿಸಿದ್ದಾನೆ.

ಅದೃಷ್ಟವಶಾತ್ ಆ ಗುಂಡು ಕಾರಿನ ಮುಂಭಾಗದ ಗಾಜಿಗೆ ತಗುಲಿದ ಪರಿಣಾಮ ಕೂದಲೆಳೆ ಅಂತರದಲ್ಲಿ ವಿಕಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ನಡೆಯುತ್ತಿದ್ದಂತೆ ಆತಂಕಗೊಂಡ ಸುತ್ತಮುತ್ತಲ ನಾಗರಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಘಟನೆ ಸಂಬಂಧ ವಿಕಾಸ್ ಲಕ್ಷ್ಮೀಪುರಂ ಠಾಣೆ ಪೊ ಲೀಸರಿಗೆ ಅಣ್ಣ ವೈಭವ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊ ಲೀಸರು ತಲೆಮರೆಸಿಕೊಂಡಿರುವ ವೈಭವ್‍ಗಾಗಿ ತನಿಖೆ ಮುಂದುವರಿಸಿದ್ದಾರೆ.

Follow us on –  Facebook / Twitter  / Google+

Facebook Comments

Sri Raghav

Admin