ಆಸ್ತಿ ವಿವಾದದ ಹಿನ್ನೆಲೆ : ಅಕ್ಕನ ಕೊಂದಿದ್ದ ತಮ್ಮನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ulfa-arrested
ದಾವಣಗೆರೆ, ಮಾ.3- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಕ್ಕನನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದ ತಮ್ಮನನ್ನು ಮಾಯಕೊಂಡಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕೊಡಗನೂರು ಸಮೀಪ ಬೊಮ್ಮೆಹಳ್ಳಿ ನಿವಾಸಿ ಗಣೇಶ್ ನಾಯ್ಕ್ ಬಂಧಿತ ಆರೋಪಿ.ಎರಡು ಎಕರೆ ಜಮೀನನ್ನು ಮಾರುವ ಸಲುವಾಗಿ ಅಕ್ಕ ಶಾಂತಾಬಾಯಿ ಹಾಗೂ ತಮ್ಮ ಗಣೇಶ್ ನಾಯ್ಕ್‍ಗೆ ನಡುವೆ ಜಗಳವಾಗಿತ್ತು. ಅಕ್ಕ ಈ ಜಮೀನನ್ನು ಮಾರಲು ಒಪ್ಪಿರಲಿಲ್ಲ. ಇದರಿಂದಾಗಿ ಕೋಪಗೊಂಡಿದ್ದ ಗಣೇಶ್‍ನಾಯ್ಕ್ ಹಾಗೂ ಶಾಂತಾಬಾಯಿ ನಡುವೆ ಜಗಳ ನಡೆಯುತ್ತಲೇ ಇತ್ತು. ಮೊನ್ನೆ ಇದೇ ವಿಷಯವಾಗಿ ಇವರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕ ಕಬ್ಬಿಣದ ರಾಡ್‍ನಿಂದ ಅಕ್ಕ ಶಾಂತಾಬಾಯಿಗೆ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಶಾಂತಾಬಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಶಾಂತಾಬಾಯಿ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿ ಗಣೇಶ್‍ನಾಯ್ಕ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin