ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ : 70 ಕ್ಕೂ ಹೆಚ್ಚು ಮಂದಿ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Blast

ಕರಾಚಿ, ಆ.8-  ಪಾಕಿಸ್ತಾನದ ಹಿಂಸಾಚಾರ ಪೀಡಿತ ಕ್ವೆಟ್ಟಾದಲ್ಲಿನ ಆಸ್ಪತ್ರೆಯೊಂದರಲ್ಲಿ ಇಂದು  ಬೆಳಗ್ಗೆ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟು, ಇತರೆ 50ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ.  ಬಲೂಚಿಸ್ತಾನ್ ಬಾರ್ ಅಸೋಸಿಯೇಷನ್(ಬಿಎ) ಅಧ್ಯಕ್ಷ ಮತ್ತು ಹಿರಿಯ ವಕೀಲ ಬಿಲಾಲ್ ಅನ್ವರ್ ಕಸಿ ಅವರನ್ನು ಅಪರಿಚಿತರ ಹಂತಕರು ಗುಂಡಿಕ್ಕಿ ಕೊಂದ ನಂತರ ಭಾರೀ ಬಾಂಬ್ ಸ್ಫೋಟವಾಗಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಬಿಲಾಲ್ ಅನ್ವರ್ ಅವರನ್ನು ವಕೀಲರು ಆಸ್ಪತ್ರೆಗೆ ಕರೆತಂದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟಗೊಂಡಿತು. ಮೃತಪಟ್ಟ 70 ಮಂದಿಯಲ್ಲಿ ಬಹುಮಂದಿ ವಕೀಲರಾಗಿದ್ದಾರೆ. ಪತ್ರಕರ್ತರೂ ಸೇರಿದಂತೆ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.  ಸ್ಫೋಟದ ಬೆನ್ನಲ್ಲೇ ಅಪರಿಚಿತ ಬಂದೂಕುದಾರಿಗಳ ಗುಂಪು ದಾಳಿ ನಡೆಸಿದೆ. ಈ ಪ್ರದೇಶವು ಅಕ್ಷರಶಃ ರಣರಂಗದಂತಾಗಿದ್ದು, ಕ್ವೆಟ್ಟಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Facebook Comments

Sri Raghav

Admin