ಆಸ್ಪತ್ರೆಯಲ್ಲೇ ಹೆತ್ತ ಮಗುವನ್ನು ಬಿಟ್ಟು ಹೋದ ನಿರ್ದಯಿ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Baby--01

ರಾಯಚೂರು, ಡಿ.24-ಹಸುಕಂದಮ್ಮನನ್ನು ನಿರ್ದಯಿ ತಾಯಿಯೊಬ್ಬಳು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿರುವ ಘಟನೆ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಜನಿಸಿದ ಹೆಣ್ಣು ಮಗುವನ್ನು ಸಾರ್ವಜನಿಕ ಆಸ್ಪತ್ರೆಯ ಹಾಸಿಗೆಯಲ್ಲೇ ಬಿಟ್ಟು ಆಕೆ ಪರಾರಿಯಾಗಿದ್ದಾಳೆ. ಆಸ್ಪತ್ರೆಯಲ್ಲಿನ ಖಾಲಿ ಹಾಸಿಗೆಯಲ್ಲಿ ಮಗುವನ್ನು ಕಂಡ ಶುಶ್ರೂಷಕಿಯರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪರಿಶೀಲನೆ ನಡೆಸಿದಾಗ ಮಗುವಿನ ಜನನ ಈ ಆಸ್ಪತ್ರೆಯಲ್ಲಿ ಆಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ನಂತರ ಆಸ್ಪತ್ರೆಗೆ ಭೇಟಿ ನೀಡಿದ ಸಿಡಿಪಿಒ ಯೋಗಿತಾಬಾಯಿ ಸಂಪೂರ್ಣ ಮಾಹಿತಿ ಪಡೆದು ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಮೂಲಕ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.

Facebook Comments

Sri Raghav

Admin