ಆಹಾರ ಅರಸಿ ಬಂದ ಚಿರತೆ ಕೊಟ್ಟಿಗೆಯಲ್ಲಿ ಬಂಧಿ (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಆ.14- ಆಹಾರ ಅರಸಿ ಬಂದ ಚಿರತೆಯೊಂದು ಕುರಿಗಳ ಶೆಡ್‍ಗೆ ನುಗ್ಗಿ ಹೊರಬರಲಾಗದೆ ಸಿಲುಕಿಕೊಂಡು ಅರಣ್ಯ ಇಲಾಖೆಯವರ ವಶವಾದ ಘಟನೆ ತಾಲೂಕಿನ ಬೈರಲಿಂಗನದೊಡ್ಡಿಯಲ್ಲಿ ನಡೆದಿದೆ.  ನಿನ್ನೆ ರಾತ್ರಿ ಜೋಗಿಸಿದ್ದಯ್ಯ ಎಂಬುವವರ ಕುರಿಯ ಶೆಡ್‍ಗೆ ಚಿರತೆಯೊಂದು ನುಗ್ಗಿ ಸಿಲುಕಿಕೊಂಡಿತು. ಹೊರಬರಲು ಸಾಕಷ್ಟು ಪ್ರಯತ್ನ ನಡೆಸಿದೆ. ಚಿರತೆ ಕುರಿ ಶೆಡ್‍ನೊಳಗೆ ಇರುವುದನ್ನು ಗಮನಿಸಿದ ಜೋಗಿ ಸಿದ್ದಯ್ಯ ಹಾಗೂ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಲೆಯಿಂದ ವಶಕ್ಕೆ ಪಡೆದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ.

ಕಾರ್ಯಾಚರಣೆಗೆಂದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಕುತೂಹಲದಿಂದ ಚಿರತೆ ನೋಡಲು ಸಾಕಷ್ಟು ಗ್ರಾಮಸ್ಥರು ನೆರೆದಿದ್ದರು. ಎಲ್ಲಿ ಚಿರತೆ ತಪ್ಪಿಸಿಕೊಳ್ಳುತ್ತದೆಯೋ ಎಂಬ ಆತಂಕವಿತ್ತು. ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾದರು. ಅರವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಚಿರತೆ ನಿತ್ರಾಣಗೊಂಡಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin