ಆಹಾರ ಕ್ರಮದ ಆಯ್ಕೆ ಅವರವರ ಬದುಕಿನ ಹಕ್ಕು ಎಂದ ಹೈಕೋರ್ಟ್, ಯೋಗಿ ಸರ್ಕಾರಕ್ಕೆ ಹಿನ್ನೆಡೆ

ಈ ಸುದ್ದಿಯನ್ನು ಶೇರ್ ಮಾಡಿ

Yogi-Court

ಲಕ್ನೋ, ಏ.6-ಆಹಾರ ಕ್ರಮದ ಆಯ್ಕೆ ಮತ್ತು ಅದಕ್ಕೆ ಸಂಬಂಧಪಟ್ಟ ಪದಾರ್ಥಗಳ ವ್ಯಾಪಾರ ಅವರವರ ಬದುಕಿನ ಹಕ್ಕಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಅಕ್ರಮ ಕಸಾಯಿಖಾನೆ ಮತ್ತು ಮಾಂಸದಂಗಡಿಗಳನ್ನು ಮುಚ್ಚುವ ಸರ್ಕಾರದ ಕ್ರಮವು ಜನರ ಜೀವನಾಧಾರ ವೃತ್ತಿ ಅಥವಾ ಆಹಾರವನ್ನು ಕಸಿದುಕೊಳ್ಳದ ರೀತಿಯಲ್ಲಿ ಸೂಕ್ತ ಯೋಜನೆಯನ್ನು 10 ದಿನಗಳ ಒಳಗೆ ರೂಪಿಸುವಂತೆ ಉತ್ತರಪ್ರದೇಶದ ಸರ್ಕಾರಕ್ಕೆ ಅದು ಸೂಚನೆ ನೀಡಿದೆ.

ತನ್ನ ಮಾಂಸದಂಗಡಿಯ ಪರವಾನಗಿಯನ್ನು ನವೀಕರಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವ್ಯಾಪಾರಿಯೊಬ್ಬರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಸೂಚನೆ ನೀಡಿದೆ.   ಉತ್ತರಪ್ರದೇಶದಲ್ಲಿ ಹಲವಾರು ಬಗೆಯ ಆಹಾರ ಸಂಸ್ಕøತಿ ಇದೆ. ಇದು ರಾಜ್ಯದ ಜಾತ್ಯತೀತ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಮೇಶ್ವರ್ ಪ್ರತಾಪ್ ಸಾಹಿ ಮತ್ತು ಸಂಜಯ್ ಹರ್‍ಕೌಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಸುವ ಸಂದರ್ಭದಲ್ಲೇ ಕಾನೂನು ಸಮ್ಮತ ವಹಿವಾಟುಗಳಿಗೂ ಆಸ್ಪದ ನೀಡಬೇಕೆಂದು ತಿಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಅಕ್ರಮ ಮತ್ತು ಯಾಂತ್ರೀಕೃತ ಕಸಾಯಿಖಾನೆಗಳಿಗೆ ಬೀಗ ಜಡಿದಿದ್ದು, ರಾಜ್ಯಾದ್ಯಂತ ಮಾಂಸದಂಗಡಿ ವಹಿವಾಟುಗಳಿಗೆ ಧಕ್ಕೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin