ಆಹಾರ ಸಮಸ್ಯೆ ಬಗೆಹರಿಸಲು ಎಲ್ಲರ ಸಹಕಾರ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

anekal

ಆನೇಕಲ್, ಸೆ.16- ದೇಶದಲ್ಲಿ ಶೇ.20ರಷ್ಟು ಬಡಜನರಿಗೆ ಒಂದು ತುತ್ತು ಅನ್ನ ಸಿಗದೆ ಸಾವು-ಬದುಕಿನ ನಡುವೆ ಜೀವನ ನಡೆಸುತಿದ್ದು, ಆಹಾರದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕು ಎಂದು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಡಾ.ಚಿನ್ನಪ್ಪಚಿಕ್ಕಹಾಗಡೆ ತಿಳಿಸಿದರು.ತಾಲ್ಲೂಕಿನ ಆಡಿಸೊಣ್ಣಹಟ್ಟಿ ಗ್ರಾಮದಲ್ಲಿರುವ ಸಿಪಾಯಿ ವೃದ್ದಾಶ್ರಮದಲ್ಲಿ ವೃದ್ದರಿಗೆ ಅನ್ನ ಬಡಿಸಿ ಮಾತನಾಡಿದ ಅವರು, ನಾವು ಏನನ್ನಾದರೂ ಪಡೆದಿದ್ದರೆ ಅದು ಸಮಾಜದಿಂದ ಮಾತ್ರ.

ದುಡಿದ ಸ್ವಲ್ಪ ಭಾಗವನ್ನು ಸಮಾಜದ ಸತ್ಕಾರ್ಯಗಳಿಗೆ ಬಳಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.ಆಡಿಸೊಣ್ಣ ಹಟ್ಟಿಗ್ರಾಮದಲ್ಲಿರುವ ಅನಾಥಶ್ರಮದಲ್ಲಿ ಸುಮಾರು 220ಕ್ಕೂ ಹೆಚ್ಚು ವೃದ್ದರು ಹಾಗೂ ಅಂಗವಿಕಲರಿದ್ದು, ತಾಲ್ಲೂಕಿನಲ್ಲಿ ಅನೇಕ ಪ್ರಭಾವಿಗಳು, ಹಣವಂತರಿದ್ದು, ತಮ್ಮ ಕೈಲಾದ ಸೇವೆಯನ್ನು ಈ ಅನಾಥಶ್ರಮಕ್ಕೆ ಸಲ್ಲಿಸಬೇಕು ಎಂದು ಸಾರ್ವಜನಿಕವಾಗಿ ಮನವಿ ಮಾಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin