ಆ್ಯಕ್ಷನ್ ಕಿಂಗ್ ಅಕ್ಷಯ್ ಗೆ 2017 ರಲ್ಲೂ ಇವೆ ಕೈತುಂಬಾ ಪ್ರಾಜೆಕ್ಟ್ ಗಳು

ಈ ಸುದ್ದಿಯನ್ನು ಶೇರ್ ಮಾಡಿ

Akshay

ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್‍ಗೆ ಹೊಸ ವರ್ಷದಲ್ಲೂ ಕೈತುಂಬಾ ಪ್ರಾಜೆಕ್ಟ್ ಗಳಿವೆ. 2017ರಲ್ಲಿ ತನ್ನ ಹೊಸ ಚಿತ್ರಗಳ ಬಗ್ಗೆ ಅಕ್ಕಿ ಮಾಹಿತಿ ಹಂಚಿಕೊಂಡಿದ್ದಾನೆ. ಜಾಲಿ ಎಲ್‍ಎಲ್‍ಬಿ-2, ಟಾಯ್ಲೆಟ್ ಎಕ್ ಪ್ರೇಮ್ ಕಥಾ, 2.0 ಮತ್ತು ಪ್ಯಾಡ್ ಮ್ಯಾನ್-ಈ ನಾಲ್ಕು ಸಿನಿಮಾಗಳು 2017ರಲ್ಲಿ ತೆರೆಕಾಣಲಿದ್ದು, ಚಿತ್ರದ ಯಶಸ್ಸಿನ ಬಗ್ಗೆ ಅಪಾರ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾಗಳ ಪೋಸ್ಟರ್‍ಗಳನ್ನೂ ಎಕೆ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ್ದಾನೆ. ಹಳೆ ವರ್ಷ ಮುಗಿದಿದೆ. ಹೊಸ ವರ್ಷ ಹೊಸ ನಿರೀಕ್ಷೆ ಎದುರಾಗಿದೆ. ಈ ಬಾರಿ ಹಿಂದೆ ನೋಡಬಾರದು, ಬದಲಿಗೆ ಮುಂದೆ ನೋಡಬೇಕು. 2017ರಲ್ಲಿ ನನ್ನ ಚಿತ್ರಗಳು ಹೀಗಿವೆ.

ನಿಮ್ಮ ಚಿಂತನೆ, ಪ್ರೀತಿ-ವಿಶ್ವಾಸ ಮತ್ತು ಬೆಂಬಲದ ಅಗತ್ಯ ನನಗಿದೆ. ಹಾಗೆಯೇ ಅದೃಷ್ಟವೂ ಮುಖ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಕ್ಷಯ್ ಬರೆದಿದ್ದಾನೆ.   ಜಾಲಿ ಎಲ್‍ಎಲ್‍ಬಿ-2 ಕಾಮಿಡಿ ಡ್ರಾಮಾ. ಶ್ರೀ ನಾರಾಯಣ್ ಸಿಂಗ್ ನಿರ್ದೇಶನದ ಟಾಯ್ಲೆಟ್ ಎಕ್ ಪ್ರೇಮ್ ಕಥಾ ವಿಭಿನ್ನ ಕಥಾವಸ್ತುವಿನ ಸಿನಿಮಾ.   ಇನ್ನು 2010ರ ಸೂಪರ್‍ಹಿಟ್ ತಮಿಳು ಸಿನಿಮಾ ಎಂರನ್‍ನ ಮುಂದಿನ ಸ್ವೀಕೆಲ್ 2.0ರಲ್ಲಿ ಅಕ್ಷಯ್, ಸೂಪರ್‍ಸ್ಟಾರ್ ರಜನಿಕಾಂತ್ ಜೊತೆ ನಟಿಸಿ ಸುದ್ದಿ ಮಾಡಿದ್ದಾನೆ. ಈ ಸಿನಿಮಾದಲ್ಲಿ ಅಕ್ಕಿ ಕ್ರೋ-ಮ್ಯಾನ್ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಜನಿಯೇ ಹಾಡಿ ಹೊಗಳಿದ್ದಾರೆ. ಅಕ್ಷಯ್‍ನ ಇನ್ನೊಂದು ಬಹು ನಿರೀಕ್ಷಿತ ಸಿನಿಮಾ ಪ್ಯಾಡ್ ಮ್ಯಾನ್. ತಮ್ಮ ಗ್ರಾಮದ ಮಹಿಳೆಯರಿಗಾಗಿ ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ನ್ಯಾಪ್‍ಕಿನ್ ಅಭಿವೃದ್ದಿಗೊಳಿಸಿದ ಅರುಣಾಚಲಂ ಮುರುಗನಾಥಂ ಎಂಬ ಸಾಧಕನ ಜೀವನಗಾಥೆ ಕುರಿತು ಸಿನಿಮಾ ಇದು. ಈ ನಾಲ್ಕು ಚಿತ್ರಗಳು ಅಕ್ಷಯ್‍ಗೆ ಈ ವರ್ಷದ ಪ್ಲಸ್ ಪಾಯಿಂಟ್.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin