ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸಿಕ್ತು ಕೇಂದ್ರ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ

ಈ ಸುದ್ದಿಯನ್ನು ಶೇರ್ ಮಾಡಿ

antisam
ನವದೆಹಲಿ, ಜ.28-ಆಟಿಸಂ, ಮಾನಸಿಕ ಅಸ್ವಸ್ಥತೆ, ಬುದ್ದಿ ಮತ್ತೆ ನೂನ್ಯತೆ ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಇನ್ನು ಮುಂದೆ ಮೀಸಲಾತಿ ಲಭಿಸಲಿದೆ. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ನೇರ ನೇಮಕಾತಿ ಪ್ರಕರಣಗಳಲ್ಲಿ ಒಟ್ಟು ಉದ್ದೆಗಳ ಸಂಖ್ಯೆಗಳಲ್ಲಿ ಇವರಿಗೆ ಶೇ.4ರಷ್ಟು ಮೀಸಲಾತಿ ಲಭಿಸಲಿದೆ. ಈ ಹಿಂದೆ ಈ ಪ್ರಮಾಣ ಶೇ.3ರಷ್ಟಿತ್ತು. ಎ, ಬಿ ಮತ್ತು ಸಿ ಸಮೂಹಗಳಿಗೆ ಈ ಮೀಸಲಾತಿಗಳನ್ನು ಅನ್ವಯಿಸಲಾಗುತ್ತದೆ.

ಗುರಿಸಬಹುದಾದ ನೂನ್ಯತೆ ಅನ್ವಯ (ನಿರ್ಧಿಷ್ಟ ನೂನ್ಯತೆಗಿಂತ ಶೇ.40ರಷ್ಟು ಕಡಿಮೆ ಇರದ ದೌರ್ಬಲ್ಯ) ಈ ಮಂದಿಗೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿ ಶೇ.4ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ನೀಡುವಂತೆ ತಿಳಿಸಿದೆ.

Facebook Comments

Sri Raghav

Admin