ಇಂಗ್ಲಿಷ್ ಬರದೇ ಕಂಗಲಾಗಿದ್ದಳಂತೆ ಕಂಗನಾ

ಈ ಸುದ್ದಿಯನ್ನು ಶೇರ್ ಮಾಡಿ

Kangana-Ranaut

ಬಾಲಿವುಡ್ನ ಬೋಲ್ಡ್ ಮತ್ತು ಫೈರ್ ಬ್ರಾಂಡ್ ನಟಿ ಕಂಗನಾ ರಾಣಾವತ್ ಒಂದು ಕಾಲದಲ್ಲಿ ಇಂಗ್ಲಿಷ್ ಬರದೆ ಕಂಗಲಾಗಿದ್ದಳಂತೆ. ಹಿಮಾಚಲ ಪ್ರದೇಶದ ಪುಟ್ಟ ಪಟ್ಟಣದಿಂದ ಕನಸಿನ ಮೂಟೆಗಳನ್ನು ಹೊತ್ತು ಬಿ-ಟೌನ್ ಅಂಗಳಕ್ಕೆ ಆಗತಾನೇ ಕಂಗನಾ ಎಂಟ್ರಿ ಕೊಟ್ಟಿದ್ದಳು. ಈಕೆಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಮೇಲಾಗಿ ಬಟ್ಟೆ ಧರಿಸುವ ಶೈಲಿಯೂ ತಿಳಿದಿರಲಿಲ್ಲ. ಅದನ್ನೇ ಮುಖ್ಯವಾಗಿಟ್ಟುಕೊಂಡು ಬಾಲಿವುಡ್ನ ಕೆಲ ಮಂದಿ ಈಕೆಯನ್ನು ಅಪಮಾನಿಸಲು ಯತ್ನಿಸಿದ್ದರಂತೆ.
ಆದರೇ ದಿಟ್ಟೆಯಾದ ನಾನು ನನ್ನ ಹಿನ್ನೆಲೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನನ್ನು ಕೊಂಕು ಮಾತುಗಳಲ್ಲಿ ಟೀಕಿಸುತ್ತಿದ್ದರು. ಅದಕ್ಕೂ ನಾನು ಕ್ಯಾರೇ ಅನ್ನಲಿಲ್ಲ.

ಎಲ್ಲವನ್ನೂ ಆತ್ಮವಿಶ್ವಾಸದಿಂದ ದಿಟ್ಟತನವಾಗಿ ಎದುರಿಸಿದೆ ಎಂದು ಕಂಗನಾ ತನ್ನ ಆರಂಭದ ದಿನಗಳ ಅನುಭವಗಳನ್ನು ಸಂದರ್ಶವೊಂದರಲ್ಲಿ ಬಿಚ್ಚಿಟ್ಟಿದ್ದಾಳೆ.
ನನ್ನ ಊರು, ನನ್ನ ಹಿನ್ನೆಲೆ ಯನ್ನು ಹೇಳಿಕೊಳ್ಳಲು ನಾನೆಂದೂ ಮುಜುಗರ ಪಟ್ಟುಕೊಳ್ಳಲಿಲ್ಲ. ನಾನು ಹಳ್ಳಿಯಿಂದ ಬಂದ ಹುಡುಗಿ, ಈಕೆಗೆ ಇಂಗ್ಲಿಷ್ ತಿಳಿದಿಲ್ಲ. ಹೊಂದಾಣಿಕೆಯ ಬಟ್ಟೆ ಧರಿಸಲ್ಲ. ಗುಂಗುರು ಕೂದಲಿನ ಈಕೆಗೆ ಹೇರ್ಸ್ಟೈಲ್ ಹೊಂದಿಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಗಿ ನನ್ನನ್ನು ಟೀಕಿಸುತ್ತಿದ್ದರು. ಆದರೆ ಜನರು ನನ್ನನ್ನು ಪರದೆ ಮೇಲೆ ನೋಡಿ ವಾಹ್ ಈಕೆ ಹಳ್ಳಿ ಸೊಗಡಿನ ಸುಂದರ ಹುಡುಗಿ, ಪ್ರತಿಭಾವಂತೆ ಎಂದು ಗುರುತಿಸಿದರು. ನಾನು ನನ್ನ ಕೆಲಸವನ್ನು ಆತ್ಮವಿಶ್ವಾಸ ಮತ್ತು ಶ್ರದ್ಧೆಯಿಂದ ಮಾಡಿದೆ. ಆಗ ನನ್ನಲ್ಲಿದ್ದ ಕೀಳರಿಮೆ ಎಲ್ಲವೂ ಕಣ್ಮರೆಯಾಯಿತು ಎಂದು ಕಂಗನಾ ಹೇಳಿಕೊಂಡಿದ್ದಾಳೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin