ಇಂಗ್ಲೆಂಡ್‍ನಲ್ಲಿ ವೀಸಾ ಉಲ್ಲಂಘಿಸಿದ 38 ಭಾರತೀಯರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Londona--01

ಲಂಡನ್, ಏ.24-ಇಂಗ್ಲೆಂಡ್‍ನ ಲೀಸೆಸ್ಟರ್ ನಗರದ ಎರಡು ಬಟ್ಟೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಬ್ರಿಟನ್‍ನ ಇಮಿಗ್ರೇಷನ್ (ವಲಸೆ ನಿಯಂತ್ರಣ) ಅಧಿಕಾರಿಗಳು, ವೀಸಾ ಉಲ್ಲಂಘನೆ ಆರೋಪದ ಮೇಲೆ ಒಂಭತ್ತು ಮಹಿಳೆಯರೂ ಸೇರಿದಂತೆ 38 ಭಾರತೀಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವೀಸಾ ಅವಧಿ ಮುಗಿದ ಅಥವಾ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ   ಇಂಗ್ಲೆಂಡ್‍ನ ಈಸ್ಟ್ ಮಿಡ್‍ಲ್ಯಾಂಡ್ ಪ್ರಾಂತ್ಯದ ಲೀಸೆಸ್ಟರ್ ನಗರದ ಎಂಕೆ ಕ್ಲೋಥಿಂಗ್ ಲಿಮಿಟೆಡ್ ಮತ್ತು ಫ್ಯಾಷನ್ ಟೈಮ್ಸ್ ಯುಕೆ ಲಿಮಿಟೆಡ್ ಕಾರ್ಖಾನೆಗಳ ಮೇಲೆ ವಲನೆ ನಿಯಂತ್ರಣ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ 38 ಭಾರತೀಯರು ಮತ್ತು ಅಫ್ಘಾನಿಸ್ತಾನದ ಒಬ್ಬ ಪ್ರಜೆಯನ್ನು ಬಂಧಿಸಿದ್ದಾರೆ.ಬಂಧಿತರಲ್ಲಿ 31 ಮಂದಿ ತಮ್ಮ ವೀಸಾ ಅವಧಿ ಮುಗಿದಿದ್ದರೂ ಕಾನೂನು ಬಾಹಿರವಾಗಿ ನೆಲೆಸಿದ್ದ ಆರೋಪಕ್ಕೆ ಗುರಿಯಾಗಿದ್ದಾರೆ. ಇನ್ನುಳಿದ ಮಂದಿ ಅಕ್ರಮವಾಗಿ ಇಂಗ್ಲೆಂಡ್ ಪ್ರವೇಶಿಸಿದ ಅಪಾದನೆಗೆ ಒಳಗಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin