ಇಂಗ್ಲೆಂಡ್ ಪಾಪ್ ಸಂಗೀತಗೋಷ್ಠಿಯಲ್ಲಿ ಪ್ರಬಲಬಾಂಬ್ ಸ್ಫೋಟ, ಸಾವಿನ ಸಂಖ್ಯೆ 24ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Blast

ಲಂಡನ್, ಮೇ 23-ಭಯೋತ್ಪಾದಕರ ಮತ್ತೊಂದು ಭೀಕರ ದಾಳಿಯಿಂದ ಇಂಗ್ಲೆಂಡ್ ತತ್ತರಿಸಿದೆ. ಅಮೆರಿಕದ ಪ್ರಸಿದ್ದ ತಾರೆ ಅರಿಯಾನಾ ಗ್ರಾಂಡೆ ಅವರ ಪಾಪ್ ಸಂಗೀತಗೋಷ್ಠಿ ವೇಳೆ ಪ್ರಬಲ ಬಾಂಬ್ ಸ್ಫೋಟಗೊಂಡು 24ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಇತರ 50 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಇಂಗ್ಲಿಷ್ ಪಟ್ಟಣ ಮ್ಯಾಂಚೆಸ್ಟರ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಯುನೈಟೆಡ್ ಕಿಂಗ್‍ಡಂನಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದನೆ ದಾಳಿಯಲ್ಲಿ ಒಂದೆಂದು ಪರಿಗಣಿಸಲಾದ ಈ ಘಟನೆಯಲ್ಲಿ ಮಕ್ಕಳು, ಯುವಕ-ಯುವತಿಯರೂ ಸಾವಿಗೀಡಾಗಿದ್ದಾರೆ.   ಪಾಪ್ ಗಾಯಕಿ ಅರಿಯಾನಾ ಅಭಿಮಾನಿಗಳಿಂದ ತುಂಬಿದ್ದ ಸಂಗೀತಗೋಷ್ಠಿ ಕಾರ್ಯಕ್ರಮದಲ್ಲಿ ಮಾನವ ಬಾಂಬ್ ದಾಳಿಯಿಂದ ಈ ಘೋರ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ದಾಳಿಯಿಂದ ಅರಿಯಾನಾ ಅಪಾಯದಿಂದ ಪಾರಾಗಿದ್ದಾರೆ.   ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಉಗ್ರನೂ ಸಹ ಹತನಾಗಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
21,000 ವೀಕ್ಷಕರ ಸಾಮಥ್ರ್ಯವಿರುವ ಮ್ಯಾಂಚೆಸ್ಟರ್ ಅರೇನಾದ (ಕ್ರೀಡಾಂಗಣ) ನೃತ್ಯ ಕಲಾವಿದರ ವಿಶ್ರಾಂತಿ ಕೊಠಡಿಯಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಸಂಗೀತಗೋಷ್ಠಿ ನಡೆಯುತ್ತಿದ್ದಾಗ ಭಾರೀ ಸ್ಫೋಟವಾಯಿತು. ಇದರ ಬೆನ್ನಲ್ಲೇ ಪ್ರೇಕ್ಷಕರ ಆಕ್ರಂದನ ಮತ್ತು ಕಿರುಚಾಟ ಕೇಳಿಬಂದಿತು. ಯುವಕ-ಯುವತಿಯರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದರು. ಸಂಗೀತ ಕಾರ್ಯಕ್ರಮದಲ್ಲಿ ಮೈಮರೆತ್ತಿದ್ದ ಪ್ರೇಕ್ಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Blast-1

ಬಾಂಬ್ ಸ್ಫೋಟದಿಂದ ಈವರೆಗೆ 24 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ವಿಷಮವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಮ್ಯಾಂಚೆಸ್ಟರ್ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಂಬ್ ದಾಳಿ ಬಗ್ಗೆ ದಿಗ್ಭ್ರಮೆ ವ್ಯಕ್ತಿಪಡಿಸಿರುವ ಪಾಪ್ ಗಾಯಕಿ ಅರಿಯಾನಾ, ತಮ್ಮ ಸಂಗೀತಗೋಷ್ಠಿಯಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಊಹಿಸಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ ಕ್ಷಮೆ ಯಾಚಿಸಿದ್ದಾರೆ.

Blast-2
ಈ ದಾಳಿ ನಂತರ ವಿಶ್ವದ ಬಟ್ಟೆ ಗಿರಣಿ ನಗರಿ ಮ್ಯಾಂಚೆಸ್ಟರ್ ಸೇರಿದಂತೆ ಇಂಗ್ಲೆಂಡ್‍ನ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.   ಭಯೋತ್ಪಾದಕರ ದಾಳಿಯನ್ನು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಖಂಡಿಸಿದ್ದಾರೆ. ಈ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಅವರು, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಎಲ್ಲ ದೇಶಗಳೂ ಒಗ್ಗೂಡಬೇಕು ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಅನೇಕ ದೇಶಗಳ ನಾಯಕರು ಈ ಕೃತ್ಯವನ್ನು ಖಂಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin